ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಸುಮಾರು 25 ಲಕ್ಷ ರು.ಗಳ ಅಲ್ಟ್ರಾಸೌಂಡ್ ಉಪಕರಣವನ್ನು ಸಿ.ಎಸ್.ಆರ್. ಅನುದಾನದಿಂದ ಕೊಡುಗೆಯಾಗಿ ನೀಡಲಾಯಿತು.
ಮಂಗಳೂರು: ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಸುಮಾರು 25 ಲಕ್ಷ ರು.ಗಳ ಅಲ್ಟ್ರಾಸೌಂಡ್ ಉಪಕರಣವನ್ನು ಸಿ.ಎಸ್.ಆರ್. ಅನುದಾನದಿಂದ ಕೊಡುಗೆಯಾಗಿ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಮಾತನಾಡಿ, ತಾಯಿ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಲೇಡಿಗೋಷನ್ ಆಸ್ಪತ್ರೆ ಯಲ್ಲಿ ದಿನಂಪ್ರತಿ 130 ಕ್ಕಿಂತಲೂ ಹೆಚ್ಚು ಸ್ಕ್ಯಾನಿಂಗ್ ನಡೆಯುತ್ತಿದ್ದು ಗುಣಮಟ್ಟದ ಸೇವೆಯನ್ನು ಜನತೆಗೆ ನೀಡಲು ಇದು ಸಹಕಾರಿಯಾಗಲಿದೆ ಎಂದರು.
ಉಪಕರಣ ಅನಾವರಣಗೊಳಿಸಿದ ಕೆ.ಎಂ.ಸಿ. ಅಸೋಸಿಯೇಟ್ ಡೀನ್ ಡಾ. ಅಶ್ಫಾಕ್ ಆಲಿ ಅವರು ಕೆ.ಎಂ.ಸಿ ಹಾಗೂ ಸರ್ಕಾರದ ಸಹಭಾಗಿತ್ವದಿಂದ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ವಿಶೇಷ ಅರ್ಥವಿದೆ. ಹೆಚ್.ಪಿ.ಸಿ.ಎಲ್. ಕೊಡಮಾಡಿದ ಈ ಉಪಕರಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ ಎಂಬ ಭರವಸೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್.ಪಿ.ಸಿ.ಎಲ್. ಜನರಲ್ ಮ್ಯಾನೇಜರ್ ಅಜಿತ್ ಅವರು, ಲೇಡಿಗೋಷನ್ ಆಸ್ಪತ್ರೆಯ ವಿಸ್ತಾರವಾದ ಸೇವೆಯನ್ನು ಕೊಂಡಾಡಿದರು. ಮುಂದಿನ ಹಂತಗಳಲ್ಲಿ ಮತ್ತಷ್ಟು ಅನುದಾನವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹೆಚ್.ಪಿ.ಸಿ.ಎಲ್ ನ ದಿನೇಶನ್, ಅಶೀಶ್ ಅಭಿಮನ್ಯು, ಮೊಹಮ್ಮದ್ ಖಾಸಿಂ, ದ್ಯಾವರಿ ಭರತ್ ಕುಮಾರ್, ಕೆ.ಎಂ.ಸಿಯ ಡಾ.ನಿಖಿಲ್ ಶೆಟ್ಟಿ, ಡಾ.ಸುಪ್ರಸನ್ನ, ಡಾ.ಶ್ವೇತಾ ಪೂಜಾರಿ, ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್ ಇದ್ದರು. ಅಂಬಿಕಾ ಮತ್ತು ಜಯಲಕ್ಷ್ಮಿ ನಿರೂಪಿಸಿದರು. ಲವೀನಾ ವಂದಿಸಿದರು.
