ಸಾರಾಂಶ
ಸೋಮವಾರಪೇಟೆ ತಥಾಸ್ತು ಸಂಸ್ಥೆ ಮತ್ತು ಜಿಲ್ಲಾ ರಕ್ತನಿಧಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರಕ್ತದಾನದಿಂದ ಜೀವದಾನ ಮಾಡಿದಂತೆ ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.ಇಲ್ಲಿನ ತಥಾಸ್ತು ಸಂಸ್ಥೆ ಮತ್ತು ಜಿಲ್ಲಾ ರಕ್ತನಿಧಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ರಕ್ತ ದಾನ ಮಾಡುವುದರಿಂದ ನೀವುಗಳು ಒಂದು ಜೀವ ಉಳಿಸಿದಂತಾಗುತದೆ. ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತ ನೀಡಲು ಮುಂದಾಗಬೇಕು ಎಂದರು.
ನೂರಾಹನ್ನೊಂದು ವರ್ಷಗಳ ಕಾಲ ಬಾಳಿ ಜಾತಿ, ಮತ, ಭೇದ ನೀಡದೆ ಸರ್ವಜನಾಂಗದ ಮಕ್ಕಳಿಗೂ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡಿದ ಕಾಯಕಯೋಗಿ ಶಿವಕುಮಾರ ಸ್ವಾಮಿಗಳ ದಾಸೋಹ ದಿನದ ನೆನಪಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.ಜಿಲ್ಲಾ ರಕ್ತ ನಿಧಿ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರು ನಾಲ್ಕು ಭಾರಿ ರಕ್ತ ದಾನಮಾಡಬಹುದು ಎಂದರು. ಹಲವು ಸಂದರ್ಭಗಳಲ್ಲಿ ರಕ್ತ ಅನಿವಾರ್ಯವಾಗಿದೆ ಆದ್ದರಿಂದ ದಾನಿಗಳು ಮುಂದೆ ಬರಬೇಕು ಎಂದ ಅವರು ರಕ್ತ ಕೊಟ್ಟವರಿಗೂ ಅನುಕೂಲವಿದೆ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಶಿವಪ್ರಸಾದ್, ವೈದ್ಯರಾದ ಸತೀಶ್, ತಥಾಸ್ತು ಸಂಸ್ಥೆ ಅಧ್ಯಕ್ಷ ಉದಯ್, ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪಟ್ಟಣ ಪಂಚಾಯ್ತಿ ಸದಸ್ಯ ಮೃತ್ಯುಂಜಯ, ಉಪಸ್ಥಿತರಿದ್ದರು.