ಮಂತ್ರಾಲಯ ಮಠದ ಗೋಶಾಲೆಗೆ ಜೋಳದ ಮೇವು ದೇಣಿಗೆ

| Published : Feb 16 2024, 01:49 AM IST

ಸಾರಾಂಶ

ಸಿಂಧನೂರು ನಗರದ ಸುಕಾಲಪೇಟೆಯ ರೈತರು 25 ಟ್ರ್ಯಾಕ್ಟರ್‌ಗಳ ಜೋಳದ ಮೇವನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಗೋಶಾಲೆಗೆ ದೇಣಿಗೆ ನೀಡಿದರು.

ಸಿಂಧನೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಗೋಶಾಲೆಗೆ ಸಿಂಧನೂರು ನಗರದ ಸುಕಾಲಪೇಟೆಯ ರೈತರು 25 ಟ್ರ್ಯಾಕ್ಟರ್‌ಗಳ ಜೋಳದ ಮೇವನ್ನು ದೇಣಿಗೆ ನೀಡಿದರು.

ಮೇವು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ಪೂಜೆ ಸಲ್ಲಿಸಿ, ಮಾತನಾಡಿ, ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳು ಆಹಾರ ಮತ್ತು ನೀರಿಗಾಗಿ ಪರದಾಡುವ ಪರಿಸ್ಥಿತಿ ಇರುತ್ತದೆ. ಅದನ್ನರಿತು ಪ್ರತಿವರ್ಷವು ಸುಕಾಲಪೇಟೆಯ ರೈತರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಗೋಶಾಲೆಗೆ ಮೇವನ್ನು ಕಳುಹಿಸುತ್ತಾ ಬಂದಿದ್ದಾರೆ. ಈ ವರ್ಷ 25 ಟ್ರ್ಯಾಕ್ಟರ್‌ ಜೋಳದ ಮೇವನ್ನು ಸಂಗ್ರಹಿಸಿ ಪೂರೈಸುವ ಮೂಲಕ ಭಕ್ತಿ ಸಮರ್ಪಿಸಿರುವುದು ಸಂತಸದ ಸಂಗತಿ. ಪ್ರಾಣಿ, ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಹೇಳಿದರು.

ಟ್ರ್ಯಾಕ್ಟರ್‌ಗಳಿಗೆ ಪೂಜೆ ಸಲ್ಲಿಸಿ, ಕಾಯಿ ಹೊಡೆಯುವ ಮೂಲಕ ಮಂತ್ರಾಲಯ ಸಂಚಾರಕ್ಕೆ ಚಾಲನೆ ನೀಡಲಾಯಿತು. ಸುಕಾಲಪೇಟೆ ರೈತರು, ಯುವಕರು ಇದ್ದರು.