ಆಸ್ಪತ್ರೆಗೆ ಮಲ್ಟಿಪ್ಯಾರಾ ಮಾನಿಟರ್ ಯಂತ್ರ ದೇಣಿಗೆ

| Published : Mar 21 2024, 01:03 AM IST

ಸಾರಾಂಶ

ಬಾಗಲಕೋಟೆ: ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಸುಮಾರು ₹1 ಲಕ್ಷ ಮೌಲ್ಯದ ಎರಡು ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಕಾಂಟೆಕ್ ಪೆಶಂಟ್ ಮಾನಿಟರ್-ಸಿ.ಎಮ್ಎಸ್ 8000 ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಸುಮಾರು ₹1 ಲಕ್ಷ ಮೌಲ್ಯದ ಎರಡು ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಕಾಂಟೆಕ್ ಪೆಶಂಟ್ ಮಾನಿಟರ್-ಸಿ.ಎಮ್ಎಸ್ 8000 ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ಅತ್ಯಾಧುನಿಕ ಯಂತ್ರಗಳು ತೀವ್ರನಿಗಾ ಘಟಕ, ನವಜಾತ ಶಿಶುಗಳ ತೀವ್ರನಿಗಾ ಘಟಕ ಮತ್ತು ಶಸ್ತ್ರಚಿಕಿತ್ಸಾ ಘಟಕಗಳಲ್ಲಿ ಬಳಕೆಯಾಗುತ್ತವೆ. ಈ ಯಂತ್ರ ತೀವ್ರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಹೃದಯ ಬಡಿತ, ನಾಡಿ ಬಡಿತ, ರಕ್ತದೊತ್ತಡ, ಇಸಿಜಿ, ದೇಹದ ಉಷ್ಣತೆ ಇತ್ಯಾದಿ ಮಾಹಿತಿಯನ್ನು ಏಕಕಾಲಕ್ಕೆ ನೀಡುತ್ತದೆ. ರೋಗಿಯ ವಿವಿಧ ವೈದ್ಯಕೀಯ ಮಾಹಿತಿ ತ್ವರಿತವಾಗಿ ದೊರೆಯುವುದರಿಂದ ವೈದ್ಯರು ರೋಗಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ.

ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಸರ್ಕಲ್ ಬಿಜಿನೆಸ್ ಹೆಡ್ ಶಂಕರ ವಿಕಾಸ, ರಿಜನಲ್ ಮ್ಯಾನೇಜರ್ ಕೆ.ಎಂ.ತೌಫಿಕ್, ಸೀನಿಯರ್ ರೀಜನಲ್ ಹೆಡ್ ಸಂದೀಪ ಬೊಂಗಾಳೆ, ಕ್ಲಸ್ಟರ್ ಹೆಡ್ ಪ್ರವೀಣ ಮತ್ತಿಕಳ್ಳಿ ಮತ್ತು ಬಾಗಲಕೋಟೆ ಬ್ರ್ಯಾಂಚ್ ಹೆಡ್ ತಿಮ್ಮಣ್ಣ ಮೆರಾಕರ್ ಅವರು ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಈ ಯಂತ್ರಗಳನ್ನು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ .ಚರಂತಿಮಠ ಅವರಿಗೆ ಹಸ್ತಾಂತರಿಸಿದರು.