ಸಾರಾಂಶ
ನಾಲ್ಕು ತಿಂಗಳ ಮುಂಚಿತವಾಗಿಯೇ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಕ್ಕಿಯ ದೇಣಿಗೆಯನ್ನು ಭಕ್ತರು ನೀಡಿದ್ದಾರೆ.ಕೊಪ್ಪಳ ತಾಲೂಕಿನ ಬಡ್ಡಿ ಹರ್ಲಾಪುರ ಗ್ರಾಮಸ್ಥರು ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ 20 ಕ್ವಿಂಟಲ್ ಅಕ್ಕಿಯನ್ನು ಟ್ರ್ಯಾಕ್ಟರಿಯಲ್ಲಿ ಮೆರವಣಿಗೆಯಲ್ಲಿ ತಂದು ನೀಡಿದ್ದಾರೆ.
ಕೊಪ್ಪಳ:
ನಾಲ್ಕು ತಿಂಗಳ ಮುಂಚಿತವಾಗಿಯೇ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಕ್ಕಿಯ ದೇಣಿಗೆಯನ್ನು ಭಕ್ತರು ನೀಡಿದ್ದಾರೆ.ಕೊಪ್ಪಳ ತಾಲೂಕಿನ ಬಡ್ಡಿ ಹರ್ಲಾಪುರ ಗ್ರಾಮಸ್ಥರು ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ 20 ಕ್ವಿಂಟಲ್ ಅಕ್ಕಿಯನ್ನು ಟ್ರ್ಯಾಕ್ಟರಿಯಲ್ಲಿ ಮೆರವಣಿಗೆಯಲ್ಲಿ ತಂದು ನೀಡಿದ್ದಾರೆ.
ಈ ಸಂದರ್ಭ ಗ್ರಾಪಂ ಸದಸ್ಯರಾದ ಹನುಮಂತಪ್ಪ ಕರಡಿ, ಹನುಮಂತಪ್ಪ ಕಾಟ್ರಳ್ಳಿ, ಮುಖಂಡರಾದ ಬಸವನಗೌಡ ಬೇವಿನಹಳ್ಳಿ ಖಾಜಸಾಬ ಗೊರೆಬಾಳ, ಕನಕಪ್ಪ ಮುಂಡರಗಿ, ಹನುಮಂತಪ್ಪ ಕುರದಗಡ್ಡಿ, ನಿಂಗಜ್ಜ ಬಂಡಿಗದ್ದಿ, ಕರಿಯಪ್ಪ ಕರ್ಕಿಹಳ್ಳಿ, ತಿಮ್ಮಣ್ಣ ಉಪ್ಪಾರ, ರಾಘವೇಂದ್ರ ಗಿಣಿಗೇರಾ, ಹನುಮಂತಪ್ಪ ಪೂಜಾರ, ತಿಮ್ಮಣ್ಣ ಗೊನ್ವಾರ, ಕನಕಪ್ಪ ಬಳಗೋಡ್, ನಾಗರಾಜ್ ಗುಳದಳ್ಳಿ, ಮಂಜುನಾಥ ಶಿವಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಟಿಬಿ ಬೋರ್ಡ್ ರಾಜ್ಯಕ್ಕೆ ಸ್ಥಳಾಂತರ ಮಾಡಲು ಒತ್ತಾಯ:
ತೆಲಂಗಾಣದ ಹೈದ್ರಾಬಾದ್‌ನಲ್ಲಿರುವ ತುಂಗಭದ್ರಾ ಅಣೆಕಟ್ಟೆ ಮಂಡಳಿಯ ಕಚೇರಿಯನ್ನು ರಾಜ್ಯದ ವಿಜಯನಗರ (ಹೊಸಪೇಟೆ)ಕ್ಕೆ ಸ್ಥಳಾಂತರ ಮಾಡಬೇಕು. ಇದರಿಂದ ಬೋರ್ಡ್ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ರೈತ ಜನ ಸಂಘದ ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ್ ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.ಕಾರಟಗಿ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಜಲ ಆಯೋಗಕ್ಕೆ ಬರೆದ ಮನವಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು.೧೯೫೩ರ ಸಂದರ್ಭದಲ್ಲಿ ಟಿಬಿ ಡ್ಯಾಮ್ ಲೋಕಾರ್ಪಣೆ ಮಾಡಲಾಗಿದ್ದು, ಅವತ್ತು ಕಲ್ಯಾಣ ಕರ್ನಾಟಕ ಭಾಗದ ೫ ಜಿಲ್ಲೆಗಳು ಹೈದ್ರಾಬಾದ್ ನಿಜಾಮನ ವ್ಯಾಪ್ತಿಯಲ್ಲಿ ಇದ್ದ ಕಾರಣ ಟಿಬಿ ಬೋರ್ಡ್ ಕಚೇರಿಯನ್ನು ಹೈದ್ರಾಬಾದ್‌ನಲ್ಲಿ ಸ್ಥಾಪನೆ ಮಾಡಲಾಗಿತ್ತು. ೧೯೫೬ರಲ್ಲಿ ಕರ್ನಾಟಕ ಏಕೀಕರಣ ನಂತರ ಕಚೇರಿ ಸ್ಥಳಾಂತರ ಮಾಡಬಹುದಾಗಿತ್ತು. ಅಣೆಕಟ್ಟೆ ರಾಜ್ಯದಲ್ಲಿ ಇದ್ದು, ಆಂಧ್ರದಲ್ಲಿ ಬೋರ್ಡ್ ಇರುವ ಕಾರಣ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅಲ್ಲಿನ ಅಧಿಕಾರಿಗಳು ಅನುಮತಿ ನೀಡುವವರೆಗೂ ಏನನ್ನು ನಿರ್ಧರಿಸುವಂತಿಲ್ಲ ಜತೆಗೆ ತಾಂತ್ರಿಕ ತೊಂದರೆ ಉಂಟಾಗುತ್ತಿವೆ. ಆದ್ದರಿಂದ ಕೂಡಲೇ ಟಿಬಿ ಬೋರ್ಡ್ ಕಚೇರಿಯನ್ನು ಕರ್ನಾಟಕದ ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಈ ವೇಳೆ ರೈತ ಮುಖಂಡ ಶರಣಪ್ಪ ದೊಡ್ಡಮನಿ, ದೊಡ್ಡನಗೌಡ, ಬಸವರಾಜ, ಚಂದ್ರಶೇಖರ್ ಕೊಲ್ಕಾಕರ್ ಸೇರಿ ಸಂಘದ ಪದಾಧಿಕಾರಿಗಳು ಇದ್ದರು.