ತಿಂಥಣಿ ಬ್ರಿಡ್ಜ್‌ನಲ್ಲಿ ಮೂರು ದಿನ ನಡೆಯುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಅಕ್ಕಿ ದೇಣಿಗೆ

| Published : Jan 13 2024, 01:30 AM IST

ತಿಂಥಣಿ ಬ್ರಿಡ್ಜ್‌ನಲ್ಲಿ ಮೂರು ದಿನ ನಡೆಯುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಅಕ್ಕಿ ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿಗೆಮ್ಮ ದೇವಸ್ಥಾನದಿಂದ ಇಲ್ಲಿನ ಹಾಲುಮತ ಸಮಾಜದವರು ಸೇರಿ ಸಂಸ್ಕೃತಿ ಉತ್ಸವದ ವೈಭವದಲ್ಲಿ ನಡೆಯಲಿರುವ ದಾಸೋಹಕ್ಕೆ ಸಂಗ್ರಹಿಸಿಲಾದ ೨೧ ಕ್ವಿಂಟಲ್ ಅಕ್ಕಿಗಳನ್ನು ವಾಹನದಲ್ಲಿ ಮೂಲಕ ಕಳುಹಿಸಿಕೊಟ್ಟರು.

ಕಾರಟಗಿ: ಕಾಗಿನೆಲೆ ಮಹಾಸಂಸ್ಥಾನಮಠ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‌ನಲ್ಲಿ ಮೂರು ದಿನ ನಡೆಯಲಿರುವ ಹಾಲುಮತ ಸಂಸ್ಕೃತಿ ವೈಭವಕ್ಕೆ ಪಟ್ಟಣದಿಂದ ೨೧ ಕ್ವಿಂಟಲ್ ಅಕ್ಕಿ ಕಳುಹಿಸಿಕೊಡಲಾಯಿತು.ಇಲ್ಲಿನ ಹುಲಿಗೆಮ್ಮ ದೇವಸ್ಥಾನದಿಂದ ಇಲ್ಲಿನ ಹಾಲುಮತ ಸಮಾಜದವರು ಸೇರಿ ಸಂಸ್ಕೃತಿ ಉತ್ಸವದ ವೈಭವದಲ್ಲಿ ನಡೆಯಲಿರುವ ದಾಸೋಹಕ್ಕೆ ಸಂಗ್ರಹಿಸಿಲಾದ ೨೧ ಕ್ವಿಂಟಲ್ ಅಕ್ಕಿಗಳನ್ನು ವಾಹನದಲ್ಲಿ ಮೂಲಕ ಕಳುಹಿಸಿಕೊಟ್ಟರು. ಮೊದಲಿಗೆ ವಾಹನಕ್ಕೆ ಪೂಜೆ ಸಲ್ಲಿಸಿ ಅಕ್ಕಿ ಚೀಲಗಳನ್ನು ತುಂಬಲಾಯಿತು. ಈ ವೇಳೆ ಹಾಲುಮತ ಸಮಾಜದವರೂ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಶರಣೇಶ ಸಾಲೋಣಿ, ಶರಣಪ್ಪ ಪರಕಿ ಮಾತನಾಡಿದರು.ಈ ವೇಳೆ ಸಣ್ಣ ಲಿಂಗಪ್ಪ ರೌಡಿಕುಂದಿ, ಶರಣಪ್ಪ ಪರಕಿ, ಪುರಸಭೆ ಮಾಜಿ ಸದಸ್ಯ ಡಿ.ಹೋಳಿಯಪ್ಪ, ಶರಣಪ್ಪ ಮಾವಿನಮಡ್ಗು, ಜಿ.ಕೆ.ರವಿಕುಮಾರ, ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಸೋಮು, ಪರಶುರಾಮ ಸಾಲೋಣಿ, ಮಂಜು ಸುದ್ದಿ, ಸೋಮನಾಥ, ಶರಣಪ್ಪ ಸಾಲೋಣಿ, ಶಿವು ಮಾಸ್ ಸಂತೋಷ್ ಇದ್ದರು.