ಸಾರ್ವಜನಿಕರ ಬೇಡಿಕೆಯಂತೆ ಕತ್ತೆ ಮಾರ್ಗ ಅಭಿವೃದ್ಧಿ: ಶಾಸಕ ಕೆ.ಎಂ.ಉದಯ್

| Published : Mar 17 2025, 12:32 AM IST

ಸಾರ್ವಜನಿಕರ ಬೇಡಿಕೆಯಂತೆ ಕತ್ತೆ ಮಾರ್ಗ ಅಭಿವೃದ್ಧಿ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ತಾಲೂಕಿನ ಸವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕತ್ತೆ ಮಾರ್ಗದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಚಂದೂಪುರ ಗ್ರಾಮದವರೆಗೂ ಹಂತ ಹಂತವಾಗಿ ರಸ್ತೆ ಅಗಲೀಕರಣಗೊಳಿಸಿ ಉತ್ತಮ ಗುಣ ಮಟ್ಟದಲ್ಲಿ ರಸ್ತೆ ಅಭಿವೃದ್ಧಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒಳಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಹಲಗೂರು ರಸ್ತೆ ವ್ಯಾಪ್ತಿ ಗ್ರಾಮಗಳ ಸಾರ್ವಜನಿಕರ ಬಹುಬೇಡಿಕೆಯಾದ ಕತ್ತೆ ಮಾರ್ಗ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಅಣ್ಣೂರು ಗೇಟ್ ಬಳಿ ಸುಮಾರು 4.20 ಕೋಟಿ ರು. ವೆಚ್ಚದಲ್ಲಿ ಸಾತನೂರು- ಮುತ್ತತ್ತಿ- ಹಲಗೂರು (ಕತ್ತೆ ಮಾರ್ಗದ) ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿ ರಸ್ತೆಗಳ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಸವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕತ್ತೆ ಮಾರ್ಗದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಚಂದೂಪುರ ಗ್ರಾಮದವರೆಗೂ ಹಂತ ಹಂತವಾಗಿ ರಸ್ತೆ ಅಗಲೀಕರಣಗೊಳಿಸಿ ಉತ್ತಮ ಗುಣ ಮಟ್ಟದಲ್ಲಿ ರಸ್ತೆ ಅಭಿವೃದ್ಧಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒಳಪಡಿಸಲಾಗುವುದು ಎಂದರು.

ಭಾರತೀನಗರ ಪ್ರಮುಖ ವಾಣಿಜ್ಯ ಕೇಂದ್ರ. ಪ್ರತಿನಿತ್ಯ ಸಾವಿರಾರು ಜನರು ಹಾಗೂ ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಲು ಹಾಗೂ ಶಾಲಾ ಮಕ್ಕಳು, ವಿದ್ಯಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ತುಂಬಾ ತೊಂದರೆಯುಂಟಾಗಿತ್ತಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರ, ರೈತರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್ ರಾಜೀವ್, ಲೋಕೋಪಯೋಗಿ ಇಲಾಖೆಯ ಎಇಇ ದೇವಾನಂದ್, ಭಾರತಿನಗರ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ಮರಿಚನ್ನೇಗೌಡ, ಸದಸ್ಯರಾದ ಪುಟ್ಟರಾಮು, ಚಂದ್ರಶೇಖರ್, ಪಿಣ್ಣ ಸತೀಶ್, ಕಾಂಗ್ರೆಸ್ ಮುಖಂಡರಾದ ದೇವರಹಳ್ಳಿ ದೊಡ್ಡೇಗೌಡ, ಅಣ್ಣೂರು ಆಟೋಪಾರ್ಟ್ಸ್ ವರದರಾಜು, ಮೆಣಸಗೆರೆ ಪ್ರಕಾಶ್, ಟಿ.ಬಿ.ಹಳ್ಳಿ ವೆಂಕಟೇಶ್, ಅಣ್ಣೂರು ಮನೋಹರ್, ರಾಘವೇಂದ್ರ, ಸಿದ್ದಲಿಂಗ ಪ್ರಸಾದ್, ಟಿಬಿ ಹಳ್ಳಿ ಅಭಿಷಕ, ಹೊನ್ನಾಯಕನಹಳ್ಳಿ ಹಳ್ಳಿ ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.