ಸಾರಾಂಶ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ನಡೆದ ಮಂಡೆಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ, ಮಹಿಳೆ, ಸಾಹಿತ್ಯ, ಸಾಹಿತಿಗಳು, ಫಿ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸಾಧನೆಗಳ ಕುರಿತು ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಭಾರತದ ಸೈನ್ಯಕ್ಕೆ ಕೊಡವರ ಕೊಡುಗೆ ಅಪಾರ ಎಂದು ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಹೇಳಿದ್ದಾರೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ನಡೆದ ಮಂಡೆಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ, ಮಹಿಳೆ, ಸಾಹಿತ್ಯ, ಸಾಹಿತಿಗಳು, ಫಿ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸಾಧನೆಗಳ ಕುರಿತು ಅವರು ಉಪನ್ಯಾಸ ನೀಡಿದರು.
ಕೊಡವರು, ವೀರರು, ಶೂರರು ಎಂದು ಕರೆಯಬೇಕಾದರೆ ಕಾರಣವೂ ಇದೆ. ವಿಶ್ವ ಮಹಾಯುದ್ಧದ ಕಾಲದಲ್ಲೇ ಮನೆಗೊಬ್ಬರಂತೆ ಸೈನ್ಯಕ್ಕೆ ಸೇರುತ್ತಿದ್ದರು. ಹುಟ್ಟಿನಿಂದಲೇ ಶೂರತ್ವ ಅವರಿಗೆ ಇದೆ. ಗಂಡು ಮಗು ಜನಿಸಿದರೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುವುದು ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದರೆ, ಒಬ್ಬರನ್ನು ಸೈನ್ಯಕ್ಕೆ ಕಳುಹಿಸುತ್ತಿದ್ದರು. ಹುಲಿ ಹಾಲನ್ನು ಕುಡಿದು ಅರಗಿಸಿಕೊಳ್ಳುತ್ತಿದ್ದರು ಎಂಬುದು ಕೊಡವರ ಇತಿಹಾಸದಲ್ಲಿ ತಿಳಿಸಲಾಗಿದೆ ಎಂದರು.ಕೊಡವರು ಪ್ರಕೃತಿ ಮತ್ತು ಆಗ್ನಿ ಅರಾಧಕರು, ಇವತ್ತಿಗೂ ಮದುವೆಯಂತಹ ಶುಭಕಾರ್ಯಗಳು ವೈದಿಕ ಪದ್ಧತಿಯಂತೆ ನಡೆಯುವುದಿಲ್ಲ. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸಿರುವ ಜನಾಂಗವಾಗಿದೆ. ಕೊಡವರ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆ, ನೃತ್ಯ, ಸಂಸ್ಕಾರ ಪ್ರಪಂಚದ ಯಾವುದೇ ಜನಾಂಗದಲ್ಲೂ ಕಂಡುಬರುವುದಿಲ್ಲ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಜಲಜಾ ಶೇಖರ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಎಸ್.ಡಿ.ವಿಜೇತ, ಪ್ರಮುಖರಾದ ಜೆಸಿ.ಶೇಖರ್, ಎಚ್.ಜೆ.ಜವರ, ಎ.ಪಿ. ವೀರರಾಜು, ಜೋಕಿಂವಾಸ್, ಜ್ಯೋತಿ ಅರುಣ್ ಇದ್ದರು.