ಬೇಲೂರಿನಲ್ಲಿ ಗೂಡಂಗಡಿಗಳ ಆರಂಭಕ್ಕೆ ಮತ್ತೆ ಅವಕಾಶ ಬೇಡ: ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ

| Published : Jun 15 2024, 01:14 AM IST

ಬೇಲೂರಿನಲ್ಲಿ ಗೂಡಂಗಡಿಗಳ ಆರಂಭಕ್ಕೆ ಮತ್ತೆ ಅವಕಾಶ ಬೇಡ: ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಪಟ್ಟಣದ ಮುಖ್ಯ ರಸ್ತೆಯ ಅಂಚಿನಲ್ಲಿ ತೆರವುಗೊಳಿಸಿರುವ ಗೂಡಂಗಡಿಗಳನ್ನು ಮತ್ತೆ ಪ್ರಾರಂಭಿಸಲು ಅವಕಾಶ ನೀಡಿದರೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪುರಸಭೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಎಚ್ಚರಿಕೆ ನೀಡಿದರು. ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿದರು.

ಕರವೇ ಪ್ರವೀಣಶೆಟ್ಟಿ ಬಣದ ಪದಾಧಿಕಾರಿಗಳು ಪುರಸಭೆಗೆ ಮನವಿ । ಹೋರಾಟ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಮುಖ್ಯ ರಸ್ತೆಯ ಅಂಚಿನಲ್ಲಿ ತೆರವುಗೊಳಿಸಿರುವ ಗೂಡಂಗಡಿಗಳನ್ನು ಮತ್ತೆ ಪ್ರಾರಂಭಿಸಲು ಅವಕಾಶ ನೀಡಿದರೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪುರಸಭೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಎಚ್ಚರಿಕೆ ನೀಡಿದರು.

ಬೇಲೂರು ಪಟ್ಟಣದ ಮುಖ್ಯ ರಸ್ತೆಯ ಅಂಚಿನಲ್ಲಿ ತೆರವುಗೊಳಿಸಿರುವ ಗೂಡಂಗಡಿಗಳನ್ನು ಮತ್ತೆ ಪ್ರಾರಂಭಿಸಲು ಅವಕಾಶ ನೀಡಿದರೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪುರಸಭೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಎಚ್ಚರಿಕೆ ನೀಡಿದರು. ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿದರು. ಯುನೆಸ್ಕೊ ಪಟ್ಟಿಗೆ ಸೇರಿರುವ ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರಿನ ಮುಖ್ಯರಸ್ತೆ, ದೇಗುಲ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಕ್ರಮ ಗೂಡಂಗಡಿಗಳ ಶೆಡ್ ಮತ್ತು ತಳ್ಳು ಗಾಡಿಗಳಿಂದ ಪಟ್ಟಣದ ಸೌಂದರ್ಯಕ್ಕೆ ತೀವ್ರ ಧಕ್ಕೆ ಉಂಟಾಗಿದೆ ಎಂದು ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೆಲ ಪುರಸಭಾ ಸದಸ್ಯರು ಗೂಡಂಗಡಿಗಳನ್ನು ಮತ್ತೆ ರಸ್ತೆ ಬದಿಯಲ್ಲಿ ಮರುಸ್ಥಾಪಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ವದಂತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ, ಯಾವ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಬಲಿಯಾಗಿ ಗೂಡಂಗಡಿಗಳಿಗೆ ಅವಕಾಶ ನೀಡಬಾರದು, ಒಂದು ವೇಳೆ ನೀಡಿದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಭೋಜೆಗೌಡ ಮಾತನಾಡಿ, ‘ಪಟ್ಟಣದಲ್ಲಿ ರಸ್ತೆ, ವೃತ್ತಗಳ ಬಳಿ ಅಕ್ರಮ ಗೂಡಂಗಡಿಗಳು, ಶೆಡ್ ನಿರ್ಮಾಣ ಮತ್ತು ತಳ್ಳುವ ಗಾಡಿಗಳಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ ಎಂದು ಕಳೆದ ಹತ್ತು ವರ್ಷದಿಂದ ನಿರಂತರವಾಗಿ ಕರವೇ ಹೋರಾಟ ನಡೆಸಿದ್ದೆವು. ಮುಖ್ಯಾಧಿಕಾರಿ ಸುಜಯಕುಮಾರ್ ಕಳೆದ ಮೂರು ದಿನದ ಹಿಂದೆ ಯಾವುದೇ ಒತ್ತಡಕ್ಕೆ ಮಣಿಯದೇ ಗೂಡಂಗಡಿಗಳು, ಶೆಡ್ ಮತ್ತು ತಳ್ಳು ಗಾಡಿಗಳನ್ನು ತೆರವುಗೊಳಿಸಿದ್ದು ಸ್ವಾಗತಾರ್ಹ. ಆದರೆ ನಮಗೆ ಬಂದ ಮಾಹಿತಿಯಂತೆ ಪುರಸಭೆಯ ಕೆಲ ಸದಸ್ಯರು ತಮ್ಮ ಸ್ವಾರ್ಥದಿಂದ ಗೂಡಂಗಡಿಗಳು, ತಳ್ಳುವ ಗಾಡಿ ಮತ್ತು ಅಕ್ರಮ ಶೆಡ್ ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತ ಮತ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ’ ಎಂದು ಹೇಳಿದರು.

‘ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮತ್ತು ಕನ್ನಡಪರ ಸಂಘಟನೆಗಳಿಗೆ ಕೆಲವು ವ್ಯಕ್ತಿಗಳು ಬೆದರಿಕೆ ಹಾಕುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಕರವೇ ಪ್ರವೀಣ್ ಶೆಟ್ಟಿ ಬಣ ಎಂದಿಗೂ ಕನ್ನಡ ನಾಡಿನ ನಾಡು, ನುಡಿ, ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ನಡೆಸುತ್ತ ಬಂದಿದ್ದು ಇಂತಹ ಪೊಳ್ಳು ಬೆದರಿಕೆಗಳಿಗೆ ಹೆದರುವ ವ್ಯಕ್ತಿತ್ವ ನಮ್ಮ ಸಂಘಟನೆಗೆ ಇಲ್ಲ’ ಎಂದು ಹೇಳಿದರು.

‘ಪುರಸಭೆ ಅಧಿಕಾರಿಗಳು ಯಾವ ಕಾರಣಕ್ಕೂ ರಾಜಕೀಯ ಅಥವಾ ಹಣದ ಅಮಿಷಕ್ಕೆ ಬಲಿಯಾಗಬಾರದು, ಕಾರಣ ಸಂಘಟನೆ ನಿಮ್ಮ ಜೊತೆಯಲ್ಲಿರುವ ಹಿನ್ನೆಲೆಯಲ್ಲಿ ನಿಮಗೆ ಬೆದರಿಕೆ ಹಾಕಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿ ಅವರ ವಿರುದ್ದ ಉಗ್ರ ಹೋರಾಟದ ಮೂಲಕ ಉತ್ತರ ನೀಡಲಾಗುತ್ತದೆ. ಈಗಾಗಲೇ ತರಕಾರಿ, ಹಣ್ಣು ಸೇರಿದಂತೆ ಇನ್ನಿತರ ವ್ಯಾಪಾರಕ್ಕೆ ಎಂದೇ ಪಟ್ಟಣದ ಐಡಿಎಸ್‌ಎಂಟಿಸಿ ವಾಣಿಜ್ಯ ಮಳಿಗೆಯಲ್ಲಿ ಅವಕಾಶ ನೀಡಿದೆ. ಅಲ್ಲಿಯೇ ವ್ಯಾಪಾರ ನಡೆಸಬೇಕು ಅದನ್ನು ಬಿಟ್ಟು ಪುನಃ ರಸ್ತೆಬದಿ ಮತ್ತು ಸಾರ್ವಜನಿಕರ ಸ್ಥಳಗಳಲ್ಲಿ ಅಸ್ವಚ್ಛತೆ ನಡೆಸಿದರೆ ಹೋರಾಟ ಅನಿವಾರ್ಯ’ ಎಂದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಜಯಪ್ರಕಾಶ್, ಕಾರ್ತಿಕ್, ಮಂಜುಚಾರ್, ಅರುಣ್ ಸಿಂಗ್, ಲೋಕೇಶ್, ಕುಮಾರ್, ಚಂದನ್, ಸೀನಣ್ಣ, ಹುಸೇನ್, ಸತೀಶ್, ಮುಂತಾದವರು ಇದ್ದರು.