ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಾಂಕ್ರಾಮಿಕ ರೋಗಗಳು ಹರಡಬಾರದು ಹಾಗೂ ಆರೋಗ್ಯ ಉತ್ತಮವಾಗಿ ಇರಬೇಕೆಂದರೆ ಪ್ರತಿಯೊಬ್ಬ ನಾಗರೀಕರು ಶೌಚಾಲಯ ಬಳಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.ತಾಲೂಕಿನ ಬಾಗೂರು ಬೀಚಗೊಂಡನಹಳ್ಳಿ ಗ್ರಾಮದ ಮಾರುತಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೀಚಗೊಂಡನಹಳ್ಳಿ ಗ್ರಾಮದ ಮಾರುತಿ ದೇವಾಲಯಕ್ಕೆ ನಿತ್ಯವೂ ನೂರಾರು ಮಂದಿ ಭಕ್ತರು ಆಗಮಿಸುತ್ತಾರೆ. ಶುಕ್ರವಾರ ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ತಂಗುವುದರಿಂದ ಭಕ್ತರಿಗೆ ಶೌಚಾಲಯದ ಸಮಸ್ಯೆ ಇತ್ತು. ಗ್ರಾಮಸ್ಥರ ಮನವಿ ಮೇರೆಗೆ ನೀರ್ಮಾಣ ಮಾಡಲಾಗಿದೆ ಎಂದರು. ರಾಜಕಾರಣಿಗಳಿಗೆ ಸಾರ್ವಜನಿಕರು ಅಧಿಕಾರಿ ನೀಡುತ್ತಾರೆ, ಅಧಿಕಾರ ಲಭಿಸಿದಾಗ ಜನತೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಬೇಕು, ಜನಪ್ರತಿನಿಧಿಗಳು ಮಾಡುವ ಕೆಲಸ ಶಾಶ್ವತವಾಗಿ ಇರುತ್ತದೆ, ಅಧಿಕಾರಿ ಪ್ರತಿ ಐದು ವರ್ಷಕ್ಕೆ ಒಮ್ಮೆ ಬದಲಾಗುತ್ತದೆ. ಆದರೆ ಮಾಡಿದ ಒಳ್ಳೆಯ ಕೆಲಸವನ್ನು ಸದಾ ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ರಾಜಕಾರಣಿಗಳು ಸ್ವಹಿತಕ್ಕಾಗಿ ಗ್ರಾಮಗಳಲ್ಲಿ ಗುಂಪುಗಾರಿಕೆ ಮಾಡುವುದು ತರವಲ್ಲ. ಇದರಿಂದ ಗ್ರಾಮದ ನೆಮ್ಮದಿ ಹಾಳಾಗುತ್ತದೆ. ಅಭಿವೃದ್ದಿ ಕೆಲಸ ಮಾಡಿಸಿ ಜನರ ಮನಸ್ಸು ಗೆಲ್ಲಬೇಕು ಹೊರತು ಸ್ವಹಿತಕ್ಕಾಗಿ ಒಡೆದು ಆಳುವ ನೀತಿ ಅನುಸರಿಸಬಾರದು ಎಂದರು.ಗ್ರಾಮದ ಮುಖಂಡರು ಚುನಾವಣೆ ವೇಳೆಯಲ್ಲಿ ರಾಜಕೀಯ ಮಾಡಲಿ ಚುನಾವಣೆ ಮುಗಿದ ಮೇಲೆ ಸಹೋದರರಂತೆ ಬದುಕಬೇಕು ಇಲ್ಲದೆ ಹೋದರೆ ಗ್ರಾಮದ ನೆಮ್ಮದಿ ಹಾಳಾಗುತ್ತದೆ, ಬಿಚಗೊಂಡನಹಳ್ಳಿ ಗ್ರಾಮಸ್ಥರು ಎಲ್ಲಾ ಪಕ್ಷದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಅಭಿವೃದ್ದಿ ಕೆಲಸ ಮಾಡಿಸಿಕೊಳ್ಳುತ್ತಿದ್ಧಾರೆ ಇದು ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು. ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಅಣತಿ ಆನಂದ್, ಅಣತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ಟಿ. ಚಂದ್ರಶೇಖರ್‌, ಬಿ.ಟಿ.ಧರ್ಮ, ಬಿ.ಜೆ.ರಮೇಶ್, ನಾಗೇಶ್, ಮುಖಂಡರಾದ ಸಂತೋ?, ಬಿ.ಜೆ.ನಂಜೇಗೌಡ, ಜಯರಾಂ, ವಳಗೇರಹಳ್ಳಿ ರಾಮು, ದೇವಾಲಯ ಭಕ್ತರು ಹಾಗೂ ಬಿಚಗೊಂಡನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.