ರಟ್ಟೀಹಳ್ಳಿ: ಮಾ. 5ರಂದು ನಡೆಯುವ ಹೋಳಿ ಹಬ್ಬಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು. ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ, ಇಲ್ಲಿ ಅನೇಕ ಜಾತಿ ಮಥ ಪಂಥಗಳಿದ್ದು, ಅವರವರ ಆಚರಣೆ ಪದ್ಧತಿಯಂತೆ ಹಬ್ಬ ಹರಿದಿನಗಳನ್ನು ಆಚರಿಸಲು ಸಂವಿಧಾನದಲ್ಲಿ ಹಕ್ಕನ್ನು ನೀಡಿದ್ದು ಅದು ಕಾನೂನನ್ನು ಮೀರದಂತೆ ಪ್ರತಿಯೊಬ್ಬರು ನಡೆದುಕೋಳ್ಳಬೇಕು ಎಂದು ಮನವಿ ಮಾಡಿದರು. ಇಂದಿನ ಯುವಕರಲ್ಲಿ ದೇವರ ಮೇಲಿನ ಭಕ್ತಿಭಾವ ಕಡಿಮೆಯಾಗುತ್ತಿದ್ದು, ಹೆಚ್ಚು ದುಶ್ಚಟಗಳ ದಾಸರಾಗಿದ್ದು, ಇದರಿಂದಾಗಿ ಡಿಜೆ, ಮನೋರಂಜನೆಯ ಚಟುವಟಿಕೆಗಳ ಮೇಲಿನ ಭಕ್ತಿ ಹೆಚ್ಚಾದ ಕಾರಣ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗುತ್ತಿದೆ. ಕಾರಣ ಯುವಕರು ಇಂಥ ಅನವಶ್ಯಕ ಚಟುವಟಿಕೆಗಳಿಂದ ದೂರ ಇದ್ದು ಸಹಬಾಳ್ವೆಯನ್ನು ಕಾಪಾಡಿಕೊಳ್ಳಿ ಹಾಗೂ ಹಬ್ಬದ ಸಂದರ್ಭದಲ್ಲಿ ಅನವಶ್ಯಕವಾಗಿ ಇಷ್ಟವಿಲ್ಲದವರಿಗೆ ಬಣ್ಣ ಹಚ್ಚುವುದು, ರಸ್ತೆ ಮಧ್ಯ ನಿಂತು ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದು, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ ಮಿಶ್ರಿತ ಬಣ್ಣ ಬಳಸದೇ ನೈಸರ್ಗಿಕ ಬಣ್ಣಗಳನ್ನು ಬಳಕೆ ಮಾಡಿ, ಮಹಿಳೆಯರಿಗೆ ಮಕ್ಕಳಿಗೆ ಬಲವಂತದಿಂದ ಬಣ್ಣ ಹಚ್ಚುವುದು ಬೇಡ, ಹೋಳಿ ಹಬ್ಬದ ಸಮಯದಲ್ಲಿ ಮದ್ಯಪಾನ ಮಾಡಿದವರನ್ನು ಆಚರಣೆಯಿಂದ ದೂರ ಇರುವಂತೆ ನೋಡಿಕೊಳ್ಳುವುದು ಅತ್ಯಂತ ಸೂಕ್ತವಾಗಿದ್ದು, ಅಂತವರು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು. ತಹಸೀಲ್ದಾರ್ ಶ್ವೇತಾ ಅಮರಾವತಿ ಮಾತನಾಡಿ, ಪ್ರತಿಯೊಬ್ಬರು ಹಬ್ಬ ಹರಿದಿನಗಳನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು, ಕಾನೂನು ಪಾಲನೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕಾನೂನನ್ನು ಯಾರು ಮೀರದೇ ಅದರ ಚೌಕಟ್ಟಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಿ ಎಂದು ಮನವಿ ಮಾಡಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಪಿ.ಡಿ. ಬಸನಗೌಡ್ರ, ದೇವರಾಜ ನಾಗಣ್ಣನವರ, ಮುತ್ತು ಬೆಣ್ಣಿ, ಬಾಬುಸಾಬ್ ಜಡದಿ, ಮಾಲತೇಶ ಬೆಳಕೆರಿ, ಹನಮಂತಗೌಡ ಭರಮಣ್ಣನವರ, ಪ್ರಶಾಂತ ದ್ಯಾವಕ್ಕಳವರ ಹಬ್ಬದ ರೂಪುರೇಷೆಗಳ ಬಗ್ಗೆ ಮಾತನಾಡಿದರು. ಡಿ.ವೈಎಸ್.ಪಿ ಲೋಕೇಶಕುಮಾರ, ಪಿಎಸ್‌ಐ ರಮೇಶ ಪಿ.ಎಸ್., ಸಿಪಿಐ ಮಂಜುನಾಥ ಪಂಡಿತ್, ಪಪಂ ಸದಸ್ಯ ಬಸವರಾಜ ಆಡಿನವರ, ರವಿ ಹದಡೇರ, ಮಕ್ಬೂಲ್ ಸಾಬ್ ಮುಲ್ಲಾ, ಹನಮಂತಪ್ಪ ಗಾಜೇರ, ನವೀನ ಮಾದರ, ವಿಜಯ ಅಂಗಡಿ, ಸುನೀಲ್ ಸರಶೆಟ್ಟರ್, ರಾಜು ಪವಾರ, ಮನೋಜ್ ಗೋಣೆಪ್ಪನವರ, ಜಾಕೀರ್ ಮುಲ್ಲಾ, ವಿನಯ ಪಾಟೀಲ್ ಹಾಗೂ ಮುಂತಾದವರು ಇದ್ದರು.
ಹೋಳಿ ಹಬ್ಬದ ಸಂಭ್ರಮದಲ್ಲಿ ಕಾನೂನು ಚೌಕಟ್ಟು ಮೀರಬೇಡಿ-ಎಸ್ಪಿ ಯಶೋದಾ
ಮಾ. 5ರಂದು ನಡೆಯುವ ಹೋಳಿ ಹಬ್ಬಅತ್ಯಂತ ಸಂಭ್ರಮ ಸಡಗರದಿಂದ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.