ಜೋಶಿ ವಿರುದ್ಧ ಅಪಪ್ರಚಾರಗಳಿಗೆ ಕಿವಿಗೊಡಬೇಡಿ-ಬೈರತಿ ಬಸವರಾಜ

| Published : May 03 2024, 01:03 AM IST

ಜೋಶಿ ವಿರುದ್ಧ ಅಪಪ್ರಚಾರಗಳಿಗೆ ಕಿವಿಗೊಡಬೇಡಿ-ಬೈರತಿ ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಮತ ಸಮಾಜಕ್ಕೆ ಹೆಚ್ಚು ಮಹತ್ವ ಕೊಟ್ಟು ಬಸವರಾಜ ಬೊಮ್ಮಾಯಿ ಕೆಲಸ ಮಾಡಿದ್ದಾರೆ. ಜೋಶಿಯವರು ಎಲ್ಲ ಜಾತಿಯವರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದರಿಂದ ಸತತ ನಾಲ್ಕು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಜೋಶಿಯವರ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಕೊಡದೆ ಗೆಲ್ಲಿಸಬೇಕು ಎಂದು ಶಾಸಕ ಬೈರತಿ ಬಸವರಾಜ ಹೇಳಿದರು.

ಶಿಗ್ಗಾವಿ: ಹಾಲು ಮತ ಸಮಾಜಕ್ಕೆ ಹೆಚ್ಚು ಮಹತ್ವ ಕೊಟ್ಟು ಬಸವರಾಜ ಬೊಮ್ಮಾಯಿ ಕೆಲಸ ಮಾಡಿದ್ದಾರೆ. ಜೋಶಿಯವರು ಎಲ್ಲ ಜಾತಿಯವರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದರಿಂದ ಸತತ ನಾಲ್ಕು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಜೋಶಿಯವರ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಕೊಡದೆ ಗೆಲ್ಲಿಸಬೇಕು ಎಂದು ಶಾಸಕ ಬೈರತಿ ಬಸವರಾಜ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಕುರುಬ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಸಮಾಜಕ್ಕೆ ಹೆಚ್ಚು ಒತ್ತು ಕೊಡುವಂತೆ, ಮತ್ತು ಸಮಾಜದ ಬೆನ್ನೆಲುಬಾಗಿ ಜೋಶಿಯವರೊಂದಿಗೆ ಸೇರಿ ಕೆಲಸ ಮಾಡುವುದಾಗಿ ಹೇಳಿದರು.

ರವಿ ದಂಡಿನ ಮಾತನಾಡಿ, ಬಿಜೆಪಿ ಸರಕಾರ ಬಾಡ, ಕಾಗಿನೆಲೆ ಸೇರಿದಂತೆ ಸಮಾಜದ ಅನೇಕ ಕ್ಷೇತ್ರಗಳ ಅಭಿವೃದ್ದಿಗೆ ಒತ್ತು ಕೊಟ್ಟು ಕೆಲಸ ಮಾಡಿದ್ದು, ಸಮಾಜವನ್ನು ಎಸ್‌ಟಿಗೆ ಸೇರಿಸುವ ಬೇಡಿಕೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ. ಆದ್ದರಿಂದ ನಮ್ಮ ಸಮಾಜ ಒಮ್ಮತದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ವಿನೋದ ಅಸೂಟಿ ಎಂಬ ಯುವಕನನ್ನು ಚುನಾವಣೆಗೆ ನಿಲ್ಲಿಸಿ ಬಲಿಪಶು ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ರವಿ ದಂಡೆನೂರ, ಪರಶುರಾಮ ದಿವಾನದಾರ, ಮಾಲತೇಶ, ಪ್ರವೀಣ ಹಳ್ಳಿ, ಫಕ್ಕೀರಪ್ಪಾ ಕುಂದೂರ, ವಿವೇಕ ರಾಮಗೇರಿ, ಬಸವರಾಜ ನಾರಾಯಣಪೂರ, ಹನುಮಂತಪ್ಪಾ ಪಾಟೀಲ, ಷಣ್ಮುಕ ಕಾಳಮ್ಮನವರ, ತಿಪ್ಪಣ್ಣಾ ಸಾತಣ್ಣವರ, ರೇಣಕನಗೌಡ ಪಾಟೀಲ, ಬೀರಪ್ಪಾ ಸಂಕಣ್ಣನವರ, ಮಾಲತೇಶ ನಾಯಕ, ದೇವಣ್ಣಾ ಗುಡ್ಡಣ್ಣನವರ ಇತರರಿದ್ದರು.