ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ಕಾರ ಬಂದರೂ ಸಹ ಕಾರ್ಯಕರ್ತರನ್ನು ನಿಗಮ ಮಂಡಳಿಯಲ್ಲಿ ಸೇರ್ಪಡೆ ಮಾಡದಿವುದರ ಬಗ್ಗೆ ಬೇಸರ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ಅಧಿಕಾರಕ್ಕೆ ಬಂದಿದ್ದು, ಸರ್ಕಾರ ರಚನೆ ಮಾಡಿದ್ದೇವೆ.ಅದೇ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಈ ಕುರಿತು ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.
ಬಾಗಲಕೋಟೆಯಲ್ಲಿ ಕಾರ್ಯಕರ್ತರು ವ್ಯಕ್ತಪಡಿಸಿದ ನೋವನ್ನು ಮುಖ್ಯಮಂತ್ರಿಗಳ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತರುವ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಕಾರ್ಯಕರ್ತರು ಎದಗುಂದದೆ ಮುಂಬರುವ ತಾಪಂ, ಜಿಪಂ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಮುಂಬರುವ ದಿನಗಳಲ್ಲಿ ಚುನಾವಣೆ ಇದ್ದು, ನಿಗಮ-ಮಂಡಳಿಗೆ ನೇಮಕ ಮಾಡದಿರುವುದರಿಂದ ಕಾರ್ಯಕರ್ತರು ತುಂಬಾ ಬೇಸರವಾಗಿದ್ದಾರೆ. 2 ವರ್ಷಗಳಿಂದ ಸರಕಾರ ಕಾರ್ಯಕರ್ತರನ್ನು ಗೌರವಿಸಲಿಲ್ಲ, ವರಿಷ್ಠರ ಗಮನಕ್ಕೆ ತಂದು ನಿಗಮ ಮಂಡಳಿ ನೇಮಕ ಮಾಡಬೇಕೆಂದು ಮುಖಂಡರಲ್ಲಿ ಒತ್ತಾಯಿಸಿದರು.ಮುಂಬರುವ ಜಿಪಂ, ತಾಪಂ ಚುನಾವಣೆ ಯಾವ ಸಂದರ್ಭದಲ್ಲಾದರೂ ಘೋಷಣೆ ಆಗಬಹುದು. ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಎಲ್ಲಾ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರಿಗೆ ವಿವರಣೆ ನೀಡುವ ಮೂಲಕ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು. ಬ್ಲಾಕ್ ಕಾಂಗ್ರೆಸ್ ಸಮೀತಿ ಹಾಗೂ ಜಿಲ್ಲಾ ಮುಂಚೂಣಿ ಘಟಕಗಳ ಹಾಗೂ ಯುವ ಕಾಂಗ್ರೆಸ್, ಎನ್.ಎಸ್.ಯು.ಐ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಎಐಸಿಸಿ ಕಾರ್ಯದರ್ಶಿ ಬೆಳಗಾವಿ ವಿಭಾಗದ ಉಸ್ತುವಾರಿ ಗೋಪಿನಾಥ ಪಳನೀಯಪ್ಪ, ವಿನಯ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಎಂ.ಬಿ. ಸೌದಾಗರ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಜೆ.ಟಿ. ಪಾಟೀಲ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಮುಖಂಡ ಸಿದ್ದು ಕೊಣ್ಣೂರ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಕೆಪಿಸಿಸಿ ಸಂಯೋಜಕ ಚಂದ್ರಶೇಖರ ರಾಠೋಡ, ಜಿಲ್ಲಾ ಘಟಕದ ನೂತನ ನಿವೃತ್ತ ಯೋಧರ ಸಂಘದ ಅಧ್ಯಕ್ಷರು, ಪಧಾದಿಕಾರಿಗಳು, ಜಿಲ್ಲೆಯ ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮಣ ದಾಸರಟ್ಟಿ, ಮಲ್ಲಪ್ಪ ಸಿಂಗಾಡಿ, ಅಶೋಕ ಕಿವಡಿ, ಹಣಮಂತ ಖಾಕಂಡಕಿ, ಬಸವರಾಜ ಸಂತಿ, ರಜಾಕ್ ಬೇಣೂರ, ಎನ್.ಎಸ್. ರಾಂಪೂರ, ಮಾಹಾದೇವ ಪಾಟೀಲ, ಅರ್ಜುನ ದಳವಾಯಿ, ಮಹೇಶ ಕೋಳಿ, ಯಂಕಪ್ಪನವರ, ಸಂಜೀವ ಬರಗುಂಡಿ, ಕಾರ್ಯಕರ್ತರಾದ ಭರತ ಈಟಿ, ಸುಭಾಸ ಲಮಾಣಿ, ರಾಜು ಲಮಾಣಿ, ಶ್ರವಣ ಖಾತೆದಾರ, ರಾಜು ಸಂಗಮ, ಭರಮು ಜಿಲ್ಲೆಯ ಮುಂಚೂಣಿ ಘಟಕದ ಅಧ್ಯಕ್ಷರಾದ ಗಿರೀಶ ಅಂಕಲಗಿ, ರಾಜೀವಗಾಂಧಿ ಪಂಚಾಯತ್ ರಾಜ್ಯ ಸಂಘಟನಾ ಸಮಿತಿಯ ರಾಜು ಮನ್ನಿಕೇರಿ, ಎಸ್.ಸಿ ಘಟಕದ ಜಿಲ್ಲಾ ಅಧ್ಯಕ್ಷ ಪ್ರಕಾಶ ಉತ್ತೂರ, ಸೇವಾದಳ ಜಿಲ್ಲಾ ಅಧ್ಯಕ್ಷ ಶರೀಫ್ ಮುಲ್ಲಾ, ಸಾಮಾಜಿಕ ಜಾಲತಾಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಫೀಕ್ ಬೇಪಾರಿ, ಓಬಿಸಿ ಜಿಲ್ಲಾ ಅಧ್ಯಕ್ಷ ಮುದಕಣ್ಣ ಅಂಬಿಗೇರ, ಕಿಸಾನ್ ಶೆಲ್ ಅಧ್ಯಕ್ಷ ಆನಂದ ಹಟ್ಟಿ, ಕುಶಲಕರ್ಮಿ ವಿಭಾಗದ ಜಿಲ್ಲಾ ಅಧ್ಯಕ್ಷ ಶಂಕರ ಪತ್ತಾರ, ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಹಣಮಂತ ಡೋಣಿ, ಪವಿತ್ರಾ ಡಿ ಜಕ್ಕಪ್ಪನವರ, ರೇಣುಕಾ ನ್ಯಾಮಗೌಡ, ಬಾಗಲಕೋಟೆ ನಗರ ಮಹಿಳಾ ಅಧ್ಯಕ್ಷೆ ರೇಣುಕಾ ನಾರಾಯಣಕರ, ಎಸ್ಟಿ ಘಟಕದ ನಗರ ಅಧ್ಯಕ್ಷ ಶಶಾಂಕ ಕಾಗಿಯವರ, ಮೀನುಗಾರಿಕೆ ವಿಭಾಗದ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷ ಆಂಜನೇಯಲು ಕಾಗೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಪರಮಾನಂದ ಕುಟರಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಕುಮಾರ ಆಲಗೂರ, ವಿಜಯ ತಿಪರಡ್ಡಿ, ಬಾಗಲಕೋಟ ವಕೀಲ ಸಂಘದ ಅಧ್ಯಕ್ಷರಾಜ ರಮೇಶ ಬದ್ದೂರ, ಸೇವಾದಳ ಮುಖಂಡರಾದ ಸುರೇಶ ಜಿಂಗಾಡೆ, ಜಿಲ್ಲಾ ಸೇವಾದಳ ಪ್ರಧಾನ ಕಾರ್ಯದರ್ಶಿ ವಿಲಾಸ ಮೆಣಸಗಿ, ರಘು ಹುಬ್ಬಳ್ಳಿ, ಅಂದಾನೆಪ್ಪ ಬ್ಯಾಡಗಿ, ಮುತ್ತು ಜೋಳದ, ರಾಜು ಹುಲ್ಯಾಳ, ಸುಧಾ ಪಾಟೀಲ, ಮಂಜುಳಾ ಭೂಸಾರೆ, ಸಿದ್ದಮ್ಮ ಪಾಟೀಲ, ಮಮತಾಜ್ ಸುತಾರ, ಸಾವಿತ್ರಿ ಗೋಲಪ್ಪನವರ, ಹಣಮಂತ ರಾಕುಂಪಿ, ಕುತುಬುದ್ದೀನ್ ಖಾಜಿ, ಮಂಜುನಾಥ ವಾಸನದ, ದ್ಯಾಮಣ್ಣ ಗಾಳಿ, ಮಹೇಶ ಹಿರೇಮಠ, ಅನೀಲ ದಡ್ಡಿ, ವಿಜಯ ಕಮತಗಿ, ಮಲ್ಲಿಕಾರ್ಜುನ ಶಿರೂರ, ಮಲ್ಲಿಕಾರ್ಜುನ ಮೇಟಿ, ಎಚ್.ಬಿ. ಗೊರವರ, ಪಕ್ಷದ ಹಿರಿಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಇದ್ದರು.