ಸಾರಾಂಶ
ಪಟ್ಟಣದ ಕಾಶಿ ಸಂಗಮೇಶ್ವರ ಮಠದ ಆವರಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಿರಂಜನ ಅವರ ತಂಡದಿಂದ ಡೋರ್ ನಂ.8 ಹಾಗೂ ದೇವನೂರು ಮಹಾದೇವ ಅವರ ಒಡಲಾಳ ನಾಟಕ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪಟ್ಟಣದ ಕಾಶಿ ಸಂಗಮೇಶ್ವರ ಮಠದ ಆವರಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಿರಂಜನ ಅವರ ತಂಡದಿಂದ ಡೋರ್ ನಂ.8 ಹಾಗೂ ದೇವನೂರು ಮಹಾದೇವ ಅವರ ಒಡಲಾಳ ನಾಟಕ ಪ್ರದರ್ಶನ ನಡೆಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರಿನ ಕೃತಿ ಆಕೃತಿ ಕಲಾ ಟ್ರಸ್ಟ್ ಕಾರಿಗನೂರು ಖಾಲಿ ರಂಗ, ಹಾಗೂ ಕತ್ತಲೆ ಬೆಳಕು ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಎರಡು ನಾಟಕಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಜೀವನ ನಡೆಸುವುದು, ಬೆಂಗಳೂರಿನ ತಾಂತ್ರಿಕ ಜೀವನಕ್ಕೆ ಹೊಂದಿಕೊಳ್ಳುವುದು, ಕೃಷ್ಣ, ಅರ್ಜುನ ಹಾಗೂ ಪರಿಮಳ ನಡುವಿನ ಭಾವನೆಗಳ, ಹಾಸ್ಯ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಬೀರುತ್ತಿರುವ ಪರಿಣಾಮದ ಬಗ್ಗೆ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.ಬೇಸಿಗೆ ಶಿಬಿರದ ಅಂಗವಾಗಿ ಚಿಲಿಪಿಲಿ ಚಿಣ್ಣರ ಮೇಳವನ್ನು 6 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ ರಂಗ ತರಬೇತಿ ಶಿಬಿರದ ಹಾರೋಣ ಬಾ ಆಟ, ಹಾಡು, ಅಭಿನಯ, ಕಥೆ ಕವನ, ಸೃಜನ ಶೀಲ ಚಟುವಟಿಕೆಗಳ ತರಬೇತಿಯ ಕುರಿತಾದ ಪೋಸ್ಟರ್‌ನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು. ನಾಟಕದ ನಂತರ ನಿರ್ದೇಶಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಬಯಲಾಟ ನಾಟಕ ಅಕಾಡೆಮಿ ಮಾಜಿ ನಿರ್ದೇಶಕ ಬಿ.ಪರಶುರಾಮ, ಹಲುವಾಗಲು ಜಿಪಂ ಮಾಜಿ ಸದಸ್ಯೆ, ಡಾ. ಸುಜಾತ ಅರುಂಡಿ, ಅಂಬ್ಲಿ ಯೋಗೇಶ್, ಶಿಕ್ಷಕ ಅಂಗಡಿ ಚನ್ನಪ್ಪ, ವಕೀಲ ಕರಿಬಸಪ್ಪ.ಪಿ, ಅಣಜಿಗೌಡ್ರು, ಡಾ. ಸಂಗೀತ, ಅರುಣ ಕುಮಾರ ಮೇದಾರ ಸಿ.ಆರ್. ಭರತ್ ಕುಮಾರ, ಶ್ಯಾಮಲ, ಎನ್.ಜಿ. ಬಸವರಾಜ, ಪವನ ದೇಶಪಾಂಡೆ, ಸೋಮಶೇಖರ, ಕಾರ್ತಿಕ ಇತರರು ಇದ್ದರು.