ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಗ್ರಾಮದ ದ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ದ್ವಾರ ಬಾಗಿಲ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಪ್ರತಿ ಗ್ರಾಮಕ್ಕೂ ದ್ವಾರ ಬಾಗಿಲುಗಳು ಇರುವುದು ರೂಢಿಗತವಾಗಿತ್ತು. ಗ್ರಾಮದ ಹಿರಿಯರೂ ಬಂದು ಕೂಡುತ್ತಿದ್ದರು. ಗ್ರಾಮಕ್ಕೆ ಹೊಸಬರು ಬಂದರೆ ಅಥವಾ ಗ್ರಾಮದಿಂದ ಹೊರಗಡೆ ಹೊದರೆ ಗ್ರಾಮದ ಹಿರಿಯರಿಗೆ ಗೋತ್ತಾಗುತಿತ್ತು ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಅವರಾಧಿ-ವೆಂಕಟಾಪುರ ರಸ್ತೆಯ ಕೆ.ಎಂ.ಎಫ್ ಡೈರಿ ಹತ್ತಿರ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಾಧ್ಯವಾದಷ್ಟು ಜನರ, ಗ್ರಾಮದ ಕಲ್ಯಾಣ ಕಾರ್ಯಕ್ಕೆ ಮಂಜೂರಾತಿ ನೀಡಿದ್ದೇನೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಪ್ರಮುಖರಾದ ತಮ್ಮಣ್ಣ ಹೊರಟ್ಟಿ, ಸಂಗಪ್ಪ ಕಂಠಿಕಾರ, ಭೀಮಶಿ ದಳವಾಯಿ, ಶಾಸಪ್ಪಗೌಡ ಪಾಟೀಲ, ಶ್ರೀಶೈಲ ಪೂಜೇರಿ, ರಂಗನಗೌಡ ಪಾಟೀಲ, ಈರಪ್ಪ ಢವಳೇಶ್ವರ, ವೆಂಕಪ್ಪ ಕೋಳಿಗುಡ್ಡ, ಮಾರುತಿ ಹಳ್ಳೂರ, ಯಲ್ಲಪ್ಪ ಗಾಂಜಿ, ಮಾದೇವ ವಟವಟಿ, ಶ್ರೀಕಾಂತ ಕವಟಕೊಪ್ಪ, ಮಾರುತಿ ನಗಚಟ್ಟಿ, ದೇವಸ್ಥಾನ ಸಮಿತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.