ಕಡೂರಿನಿಂದ- ಮಲ್ಲೇಶ್ವರದವರೆಗೆ ಡಬಲ್ ರೋಡ್: ಶಾಸಕ ಕೆ.ಎಸ್. ಆನಂದ್

| Published : Nov 15 2024, 12:34 AM IST

ಸಾರಾಂಶ

ಕಡೂರು, ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಜೊತೆ ಜನದಟ್ಟಣೆ ಹೆಚ್ಚಾಗಿರುವ ಕಾರಣ ಸುಗಮ ಸಂಚಾರಕ್ಕಾಗಿ ಕಡೂರಿನಿಂದ- ಮಲ್ಲೇಶ್ವರದವರೆಗೆ ಡಬಲ್ ರೋಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ರಸ್ತೆಯ ಮರು ಡಾಂಬರೀಕರಣದ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಜೊತೆ ಜನದಟ್ಟಣೆ ಹೆಚ್ಚಾಗಿರುವ ಕಾರಣ ಸುಗಮ ಸಂಚಾರಕ್ಕಾಗಿ ಕಡೂರಿನಿಂದ- ಮಲ್ಲೇಶ್ವರದವರೆಗೆ ಡಬಲ್ ರೋಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕಡೂರು ಪಟ್ಟಣದ ಮರವಂಜಿ ವೃತ್ತದಲ್ಲಿ ಸಿಆರ್ ಎಫ್ ನಿಧಿಯಿಂದ ₹6 ಕೋಟಿ ವೆಚ್ಚದಲ್ಲಿ ಕಡೂರಿನಿಂದ - ಬೆಲಗೂರು ಮರವಂಜಿ ಮುಖಾಂತರ ಶ್ರೀರಾಮಪುರ ಸೇರುವ ತನಕ ರಾಜ್ಯ.ಹೆ.152ರ 7.350 ಕಿ.ಮೀ. ವರೆಗೆ ಆಯ್ದ ಭಾಗದಲ್ಲಿ ರಸ್ತೆಯ ಮರು ಡಾಂಬರೀಕರಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

₹6 ಕೋಟಿ ವೆಚ್ಚದಲ್ಲಿ ಮರು ಡಾಂಬರಿಕರಣಕ್ಕೆ ಕೇಂದ್ರ ಮೀಸಲು ನಿಧಿಯಿಂದ ಈ ಅನುದಾನ ಬಿಡುಗಡೆ ಯಾಗಿದೆ. ಸದರಿ ರಸ್ತೆ ಹಾಳಾಗಿರುವ ಕಾರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಕಡೂರಿನ ಬಹುಪಾಲು ಜನರು ಈ ಕಡೂರು- ಮರವಂಜಿ ರಸ್ತೆಯಲ್ಲಿ ಸಂಚರಿಸುತಿದ್ದಾರೆ. 8 ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಈ ರಸ್ತೆಗೆ ಅನುದಾನ ಮಂಜೂರಾಗಿತ್ತು. ಮತ್ತೆ ಇದೀಗ ಈ ರಸ್ತೆಯ ಸುಮಾರು 7. ಕಿಲೋ ಮೀಟರ್ ವರೆಗೆ ರಸ್ತೆ ಡಾಂಬರೀಕರಣ ನಡೆಯಲಿದೆ. ಮುಂದೆ 2ನೇ ಹಂತದಲ್ಲಿ ಮುಂದುವರಿದ ಕಾಮಗಾರಿ ಯಲ್ಲಿ ಈ ರಸ್ತೆಗೆ ಹೆಚ್ಚಿನ ಅನುದಾನ ತರಲಾಗುವುದು ಎಂದರು.

ಕಡೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಕಾರಣ ಕಡೂರಿನಿಂದ- ಮಲ್ಲೇಶ್ವರದವರೆಗೆ ಡಬಲ್ ರೋಡ್ ಮಾಡುವ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಪುರಸಭೆಯಿಂದ ಮಾಹಿತಿ ಪಡೆದು ರಾಜ್ಯ ಸರಕಾರದಿಂದ ಡಬಲ್ ರೋಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ತಿಳಿಸಿ, ಚಾಲನೆ ನೀಡಲಾಗುತ್ತಿರುವ ಈ ಕಾಮಗಾರಿ ಬಹುದೊಡ್ಡ ಕಾಮಗಾರಿಯಾಗಿದ್ದು ಗುಣಮಟ್ಟ ಕಾಯ್ದು ಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಪುರಸಭೆ ಅಧ್ಯಕ್ಷ ಭಂಢಾರಿ ಶ್ರೀನಿವಾಸ್ ಮಾತನಾಡಿ, 8 ವರ್ಷಗಳ ಹಿಂದೆ ಕಡೂರಿನಿಂದ- ಮರವಂಜಿ ವರೆಗೆ ಈ ರಸ್ತೆ ನಿರ್ಮಾಣ ಮಾಡಲಾಯಿತು. ಇದೀಗ ಅಲ್ಲಲ್ಲಿ ಗುಂಡಿ ಬಿದ್ದಿರುವ ಕಾರಣ ಶಾಸಕರು ಈ ರಸ್ತೆಗೆ 6 ಕೋಟಿ ಅನುದಾನ ತಂದಿದ್ದಾರೆ. ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸುಗಮ ಸಂಚಾರಕ್ಕೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಕಡೂರು ಪುರಸಭೆ ಯನ್ನು ನಗರಸಭೆಯಾಗಿ ಮೇಲುದರ್ಜೆಗೆ ಏರಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಲ್ಲದೆ ಮಲ್ಲೇಶ್ವರದವರೆಗೆ ಡಬಲ್‌ ರೋಡ್ ನಿರ್ಮಾಣಕ್ಕೆ ರಸ್ತೆ ಮದ್ಯಭಾಗದಿಂದ ಎರಡೂ ಕಡೆ 70 ಅಡಿವರೆಗೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಜನರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವಲ್ಪಮಟ್ಟಿಗೆ ತೊಂದರೆ ಆಗುವ ಕಾರಣ ಜನರು, ವ್ಯಾಪಾರಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಲ್ಲೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಧರ್ಮಣ್ಣ, ಸದಸ್ಯ ವಸಂತ ಕುಮಾರ್ ಮುಖಂಡರಾದ ಅಬೀದ್ ಪಾಷಾ, ಮುಬಾರಕ್ ಸೇರಿದಂತೆ ಮತ್ತಿತರರು ಹಾಜರಿದ್ದರು.

13 ಕೆಕೆಡಿಯು1.

ಕಡೂರು ಪಟ್ಟಣದ ಮರವಂಜಿ ವೃತ್ತದಲ್ಲಿ 6 ಕೋಟಿ ವೆಚ್ಚದಲ್ಲಿ ಕಡೂರು ಪಟ್ಟಣದ ಮರವಂಜಿ ವೃತ್ತದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು.