ಸಾರಾಂಶ
ಶೆಲವಡಿ ಗ್ರಾಮದ ವಿದ್ಯಾ ಮಲ್ಲಿಕಾರ್ಜುನ ಗಾಣಿಗೇರ(19) ಮೃತ ದುರ್ದೈವಿ. ಇವಳ ಗಂಡ, ಅತ್ತೆ, ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನವಲಗುಂದ:
ವರದಕ್ಷಿಣೆ ಕಿರುಕುಳದಿಂದ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಗುರುವಾರ ಅಣ್ಣಿಗೇರಿ ತಾಲೂಕಿನ ಶೆಲವಡಿ ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶೆಲವಡಿ ಗ್ರಾಮದ ವಿದ್ಯಾ ಮಲ್ಲಿಕಾರ್ಜುನ ಗಾಣಿಗೇರ(19) ಮೃತ ದುರ್ದೈವಿ. ಇವಳ ಗಂಡ, ಅತ್ತೆ, ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 7 ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು. ಮದುವೆಯಾದ ಕೆಲ ದಿನ ಸರಿಯಾಗಿದ್ದ ಗಂಡನ ಮನೆಯವರು ಬಳಿಕ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದರು ಎಂದು ಮೃತಳ ತಂದೆ ನಾಗಪ್ಪ ಮಾಡಲಗೇರಿ ದೂರಿನಲ್ಲಿ ಆರೋಪಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಪಿ.ಎಸ್.ಐ. ಹಾಗೂ ಮೇಲಧಿಕಾರಿಗಳು ಭೇಟಿ ನೀಡಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವಿದ್ಯಾ ಮಲ್ಲಿಕಾರ್ಜುನ ಗಾಣಿಗೇರ ಮೂಲತಃ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಹಿಳೆ ಎಂದು ತಿಳಿದುಬಂದಿದೆ.