ಡಾ. ರಾಚೋಟೇಶ್ವರ ಶಿವಾಚಾರ್ಯರ 57ನೇ ಮೌನಾನುಷ್ಠಾನ

| Published : Oct 23 2024, 12:44 AM IST

ಸಾರಾಂಶ

Dr. 57th Maunanusthana of Rachoteshwara Shivacharya

-ಡಾ.ರಾಚೋಟೇಶ್ವರ ಶಿವಸಮಾಧಿಯ ಮುಂದುಗಡೆ ದರ್ಶನ ಪಡೆದ ಭಕ್ತರು

----

ಕನ್ನಡಪ್ರಭ ವಾರ್ತೆ ಗುರುಮಠಕಲ್

ಗದಗ ಜಿಲ್ಲೆಯ ಅಂತೂರ-ಬೆಂತೂರ ಗ್ರಾಮದ ಜಗದ್ಗುರು ಬೂದೀಶ್ವರ ಸಂಸ್ಥಾನಮಠದ ಪೀಠಾಧಿಪತಿ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 57ನೇ ಮೌನಾನುಷ್ಠಾನ, 13ನೇ ಶಿವಯೋಗ ಸಮಾಧಿ ಮತ್ತು ಧರ್ಮ ಜಾಗೃತಿಯ ಸಮಾರೋಪ ಸಮಾರಂಭ ಅ.23ರಂದು ಬೆಳಿಗ್ಗೆ 10:15 ಗಂಟೆಗೆ ಜರುಗಲಿದೆ ಎಂದು ಭಕ್ತ ಶರಣಪ್ಪ ಕಲಾಲ್ ತಿಳಿಸಿದರು.

ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 22 ದಿನಗಳಿಂದ ಶಿವಯೋಗ ಸಮಾಧಿಯಲ್ಲಿದ್ದು, ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹ ದೇವಸ್ಥಾನದಲ್ಲಿ ಪುರಾಣ ಮತ್ತು ಭಜನೆಯಲ್ಲಿ ತಲ್ಲೀನರಾಗಿದ್ದಾರೆ. ಭಕ್ತರಿಗೆ ದಿನನಿತ್ಯ ದಸೋಹ ವ್ಯವಸ್ಥೆ ಮಾಡಲಾಗಿದೆ. ಅ.23 ರಂದು ಪ್ರಮುಖ ಸ್ವಾಮಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಪೂಜ್ಯರು ಶಿವಾಯೋಗ ಸಮಾಧಿಯಿಂದ ಎದ್ದೇಳಿ ಬಂದು ದರ್ಶನ ನೀಡುವರು. ಅವರ ದರ್ಶನ ನಂತರ ತುಲಾಭಾರ ಮತ್ತು ಪಲ್ಲಕ್ಕಿ ಸೇವೆ ಮಾಡಲಾಗುವುದು ಎಂದರು.

ಅಬ್ಬೆತುಮಕೂರು ಮಠದ ಪೂಜ್ಯ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿ ಸಾನಿಧ್ಯ ವಹಿಸುವರು. ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿ, ಸೇಡಂನ ವೀರಕ್ತಮಠದ ಪಂಚಾಕ್ಷರಿ ಮಹಾಸ್ವಾಮಿ ಹಾಲಪಯ್ಯ, ಜಾಕನಹಳ್ಳಿ ಶಿವಯೋಗೇಶ್ವರ ಮಹಾಮಠ ಲಭಿನವ ಗವಿಸಿದ್ಧಲಿಂಗ ಶಿವಚಾರ್ಯ, ಆದಿಮಠಂ ಪಾಟಮಿದಿಪಲ್ಲಿ ಉತ್ತರಾಧಿಕಾರಿ ಪರಮ ಪೂಜ್ಯ ಗುರುಲಿಂಗ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸಚಿವ ಡಾ. ಶರಣಪ್ರಕಾಶ ಪಾಟೀಲ್, ತೆಲಂಗಾಣ ರಾಜ್ಯದ ಸ್ಪೀಕರ್ ಗಡಮ್ ಪ್ರಸಾದಕುಮಾರ, ಕಲಬುರಗಿ ಲೋಕಸಭೆ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಜ್ಯೋತಿ ಬೆಳಗಿಸುವರು. ಶಾಸಕ ಶರಣಗೌಡ ಕಂದಕೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಭಕ್ತರಾದ ಚನ್ನಬಸಪ್ಪ ಕೋಟಗೇರಾ, ನಾರಾಯಣ ಪೆಂಡಂ, ಸಾಬಣ್ಣ ಗರೇಬನ್ನೆ, ಗಂಗಪ್ಪ ಕೋಟಗೇರಾ, ಅಶೋಕ ಇಟಕಾಲ, ನಾಗಪ್ಪ ಶನ್ನೆ, ಭೀಮಪ್ಪ ಬೋಯಿನ್, ಅಂಜನೇಯ ನಾಯ್ಕೋಡಿ, ಮೌರ್ಯ ಮುರಳಿಧರ ಮತ್ತು ಬುಗ್ಗಪ್ಪ ಘಂಟಿ ಇದ್ದರು.

----

22ವೈಡಿಆರ್12: ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದ ಆವರಣದಲ್ಲಿ ಜಗದ್ಗುರು ಡಾ.ರಾಚೋಟೇಶ್ವರ ಶಿವಸಮಾಧಿಯ ಮುಂದುಗಡೆ ಭಕ್ತರು ದರ್ಶನ ಮಾಡಿಕೊಂಡರು.