ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನಾಚರಣೆ

| Published : Apr 15 2025, 12:50 AM IST

ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಧಾಕರ ದಾನಶಾಲೆ ಡಾ.ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಧಾಕರ ದಾನಶಾಲೆ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಜೊತೆಗೆ ಹಲವಾರು ಆಧುನಿಕ ಯೋಜನೆಗಳಿಗೆ ನಾಂದಿ ಹಾಡಿದ್ದಾರೆ, ಅದರ ಒಂದು ಸಣ್ಣ ಉದಾಹರಣೆಯೆಂದರೆ ವಿದ್ಯುತ್ ಇಲಾಖೆಯಿಂದ ಮನೆ ಮನೆ ವಿತರಣೆಯಾಗುವ ವಿದ್ಯುತಿಗೆ ಬಿಲ್‌ ನೀಡುವ ಕಲ್ಪನೆ ದೇಶಕ್ಕೆ ಕೊಟ್ಟವರು ಅಂಬೇಡ್ಕರ್‌. ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಅವರ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರವನ್ನು ಮಾಡುತ್ತಿರುವುದು ಖೇದಕರ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಸರ್ವರಿಗೂ ಸಮಬಾಳು ಸಮಪಾಲು ನೀಡುವ ಧ್ಯೇಯೊದ್ದೇಶದಿಂದ ರಚಿತವಾದ ಭಾರತದ ಸಂವಿಧಾನದ ನಿಜವಾದ ಆಶಯಗಳು ಇಂದು ಈಡೇರುತ್ತಿಲ್ಲ, ಸಂವಿಧಾನಕ್ಕೆ ವಿರುದ್ಧವಾಗಿ ಜಾತಿ ಅಸಮಾನತೆಗಳು ವಿವಿಧ ರೂಪದಲ್ಲಿ ನಿರಂತರವಾಗಿ ಮುಂದುವರೆಯುವುದು ಬೇಸರದ ಸಂಗತಿಯಾಗಿದೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ವಕೀಲ ರೆಹಮತುಲ್ಲಾ ಮಾತನಾಡಿ, ಸಂವಿಧಾನವನ್ನು ಕಾನೂನಿನ ಮೂಲಕ ಭಾರತದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಂಬೇಡ್ಕರ್ ಪಾತ್ರ ಪ್ರಧಾನ ಎಂದರು.

ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಬಂಗೇರ, ಮಾಜಿ ಪುರಸಭಾ ಅಧ್ಯಕ್ಷ ಸುಭಿತ್.ಎನ್.ಆರ್, ಪುರಸಭಾ ಸದಸ್ಯೆ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಮೀನುಗಾ ಕಾಂಗ್ರೆಸಿನ, ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಸದಸ್ಯೆ ಅಶ್ಫಕ್ ಅಹಮದ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರುಕ್ಮಾಯ ಶೆಟ್ಟಿಗಾರ್, ಸುದರ್ಶನ್ ಬಂಗೇರ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ, ಮೀನುಗಾರ ಘಟಕದ ಅದ್ಯಕ್ಷ ಮುರಳಿ ರಾಣೆ ಮಾರ್ಕೆಟ್ ಮುಂತಾದವರು ಇದ್ದರು.

ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸ್ವಾಗತಿಸಿದರು. ನಾಗೇಶ ಆಚಾರ್ಯ ಬೆಳ್ಮಣ್ ಅವರು ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ರಮ ಸಕ್ರಮ ಸಮಿತಿಯ ರಮೇಶ್ ಬೆಜಕಳ ಅವರು ಧ್ಯೆಯ ಗೀತೆಯನ್ನು ಹಾಡಿದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ವಂದಿಸಿದರು.