ಸಾರಾಂಶ
ಹಿರೇಕೆರೂರು: ಎಲ್ಲ ಸಮಾಜದ ಏಳಿಗೆಗೆ ಡಾ. ಬಿ.ಆರ್. ಅಂಬೇಡ್ಕರ ಶ್ರಮಿಸಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಂಡು ಸದೃಢ ದೇಶ ನಿರ್ಮಾಣ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಹಾಗೂ ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿಗಳ ಒಕ್ಕೂಟಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ, ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ಬಿ.ಆರ್. ಅಂಬೇಡ್ಕರ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಶ್ರೇಷ್ಠವಾಗಿವೆ. ಅವರು ನೀಡಿದ ಸಂವಿಧಾನ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅವರ ಆಶಯಗಳಿಗೆ ತಕ್ಕಂತೆ ನಾವೆಲ್ಲ ನಡೆಯಬೇಕು. ಎಲ್ಲ ಕ್ಷೇತ್ರಗಳಿಗೂ ಸಂವಿಧಾನದ ಮೂಲಕ ಅನುಕೂಲ ಕಲ್ಪಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಭಾರತಕ್ಕೆ ತನ್ನದೇ ಸೇವೆಯನ್ನು ಸಲ್ಲಿಸಿದ ಮಹಾನ್ ಚೇತನ ಡಾ. ಬಾಬು ಜಗಜೀವನರಾಮ್ ಅವರು. ದೇಶದಲ್ಲಿ ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಹಬೂಬಸಾಬ ನದಾಫ, ಪಪಂ ಅಧ್ಯಕ್ಷೆ ಸುಧಾಚಿಂದಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಪಪಂ ಉಪಾಧ್ಯಕ್ಷ ರಾಜುಕರಡಿ ಸದಸ್ಯರಾದ ರಮೇಶ ತೊರಣಗಟ್ಟಿ, ಕವಿತಾ ಹರ‍್ನಳ್ಳಿ, ಹನುಮಂತಪ್ಪ ಕುರಬರ, ರಜಿಯಾ ಅಸದಿ, ಜಿಪಂ ಮಾಜಿ ಸದಸ್ಯರಾದ ಬಿ.ಆರ್. ಪುಟ್ಟಣ್ಣನವರ, ಎನ್.ಎಂ. ಈಟೇರ, ಮುಖಂಡರಾದ ಮಾಲತೇಶ ಮಾದರ, ಬಸವರಾಜ ಕಾಲ್ವೀಹಳ್ಳಿ, ದುರಗಪ್ಪ ನೀರಲಗಿ, ಗಿರೀಶ ಬಾರ್ಕಿ, ಪ್ರಶಾಂತ ತಿರಕಪ್ಪನವರ, ಗಂಗಾಧರ್ ಬೋಗೆರ, ಭರಮಪ್ಪ ಹರಿಜನ, ಸಿ.ಎಚ್. ಬಾಲಚಂದ್ರ, ರಮೇಶ ಹರಿಜನ, ಮಹದೇವಪ್ಪ ಮಾಳಮ್ಮನವರ್, ಶಂಕರ ತಿರಕಪ್ಪನವರ, ರಾಜು ಮಾದರ, ರಮೇಶ ವಡ್ಡರ ಇತರರು ಇದ್ದರು.ವಿದ್ಯುತ್ ತಂತಿ ಹರಿದು ಎತ್ತು ಸಾವುಶಿಗ್ಗಾಂವಿ: ಪಟ್ಟಣದ ಆಫೀನ ಕೆರೆ ತೋಟದ ಜಮೀನೊಂದರಲ್ಲಿ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ಹರಿದು ಬಿದ್ದು ಎತ್ತು ಸಾವಿಗೀಡಾದ ಘಟನೆ ಇತ್ತೀಚೆಗೆ ನಡೆದಿದೆ.ಪಟ್ಟಣದ ನಿವಾಸಿ ಶಿವಪ್ಪ ಫಕೀರಪ್ಪ ಬನ್ನಿಕೊಪ್ಪ ಅವರಿಗೆ ಸೇರಿದ ಎತ್ತು ಎಂದು ತಿಳಿದುಬಂದಿದೆ. ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ವಿದ್ಯುತ್ ತಂತಿ ಸರಿಪಡಿಸುವಂತೆ ಹಲವಾರು ಬಾರಿ ಶಿವಪ್ಪ ಬನ್ನಿಕೊಪ್ಪ ಅವರು ಹೆಸ್ಕಾಂ ಇಲಾಖೆಯ ಅಧಿಕಾರಿಗೆ ಮನವಿ ಮಾಡಿದ್ದರು. ಆದರೂ ಸ್ಪಂದಿಸಿರಲಿಲ್ಲ.ರೈತ ಸಂಘದ ಮುಖಂಡರಾದ ಬಸಲಿಂಗಪ್ಪ ನರಗುಂದ, ಸಂತೋಷ ಕಟಗಿ, ಶಂಕರಗೌಡ ಪಾಟೀಲ, ಮುತ್ತಪ್ಪ ಗುಡಿಗೇರಿ, ಆನಂದ ಕೆಳಗಿನಮನಿ ಅವರು, ಕೂಡಲೇ ರೈತರಿಗೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಸೂಚನೆ: ವಿದ್ಯುತ್ ತಂತಿ ಹರಿದು ಬಿದ್ದು ಎತ್ತು ಸಾವಿಗೀಡಾಗಿರುವುದು ನನ್ನ ಗಮನಕ್ಕೆ ಬಂದಿದೆ. ರೈತರನ್ನು ಭೇಟಿ ಮಾಡಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಮಾತನಾಡುತ್ತೇನೆ. ರೈತರಿಗೆ ಪರಿಹಾರದ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜೀಮಪೀರ್ ಎಸ್. ಖಾದ್ರಿ ತಿಳಿಸಿದ್ದಾರೆ.