ಸಮಾನತೆಯ ಹರಿಕಾರ ಡಾ.ಅಂಬೇಡ್ಕರ್‌

| Published : Apr 16 2024, 01:06 AM IST

ಸಾರಾಂಶ

ಬಾಗಲಕೋಟೆ: ಸಾಮಾಜಿಕ ಸಮಾನತೆಗೆ ಶಿಕ್ಷಣವೇ ಮೂಲಮಂತ್ರವಾಗಬೇಕು. ಶಿಕ್ಷಣ ಜ್ಞಾನದಿಂದಲೇ ಸಮಾಜದಲ್ಲಿರುವ ಮೌಢ್ಯಗಳನ್ನು ಹೊಡೆದೋಡಿಸಿ, ದೀನದಲಿತರ ಮತ್ತು ಶೋಷಿತರನ್ನು ಉದ್ಧಾರ ಮಾಡಲು ಸಾಧ್ಯವಿದೆ ಎಂದು ಭಾರತ ರತ್ನ ಡಾ.ಬಾಬಾಸಾಹೇಬ್‌ ಅಂಬೇಡ್ಕರ ಅವರು ಜಗತ್ತಿಗೆ ಸಾರಿ ಹೇಳುವ ಮೂಲಕ ವಿಶ್ವ ಮಾನವರಾಗಿದ್ದಾರೆ. ಡಾ.ಅಂಬೇಡ್ಕರಅವರು ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾಮಾಜಿಕ ಸಮಾನತೆಗೆ ಶಿಕ್ಷಣವೇ ಮೂಲಮಂತ್ರವಾಗಬೇಕು. ಶಿಕ್ಷಣ ಜ್ಞಾನದಿಂದಲೇ ಸಮಾಜದಲ್ಲಿರುವ ಮೌಢ್ಯಗಳನ್ನು ಹೊಡೆದೋಡಿಸಿ, ದೀನದಲಿತರ ಮತ್ತು ಶೋಷಿತರನ್ನು ಉದ್ಧಾರ ಮಾಡಲು ಸಾಧ್ಯವಿದೆ ಎಂದು ಭಾರತ ರತ್ನ ಡಾ.ಬಾಬಾಸಾಹೇಬ್‌ ಅಂಬೇಡ್ಕರ ಅವರು ಜಗತ್ತಿಗೆ ಸಾರಿ ಹೇಳುವ ಮೂಲಕ ವಿಶ್ವ ಮಾನವರಾಗಿದ್ದಾರೆ. ಡಾ.ಅಂಬೇಡ್ಕರಅವರು ಸಾಮಾಜಿಕ ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.

ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ನಮ್ಮ ಭಾರತದ ಸಂವಿಧಾನವು ಸರ್ವಶ್ರೇಷ್ಠವಾಗಿದೆ. ಅಂಬೇಡ್ಕರ ಅವರ ಘನವಾದ ವ್ಯಕ್ತಿತ್ವ, ಸರಳತೆಯ ಬದುಕು, ದಿವ್ಯ ಪಾಂಡಿತ್ಯವನ್ನು ಹೊಂದಿದ್ದರು. ಅವರ ಚಿಂತನೆಗಳಲ್ಲಿರುವ ಸಾಮಾಜಿಕ ಮೌಲ್ಯಗಳು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿವೆ. ಅವರು ಹೇಳಿರುವ ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಕಲಾದಗಿ ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂಪತ್ತ ಲಮಾಣಿ ಅವರು ಡಾ.ಅಂಬೇಡ್ಕರ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಅಜೀತ ನಾಗರಾಳೆ, ಡಾ.ಜಿ.ಜಿ.ಹಿರೇಮಠ, ಡಾ.ಸುಮಂಗಲಾ ಮೇಟಿ, ಡಾ.ಚಂದ್ರಶೇಖರ ಕಾಳನ್ನವರ, ಪ್ರೊ.ಪರಸಪ್ಪ ತಳವಾರ, ರಾಘವೇಂದ್ರ ಬಡಿಗೇರ, ನಾರಾಯಣ ಪತ್ತಾರ, ದೇವೇಂದ್ರ, ತಾಯಕ್ಕ ಚಲವಾದಿ ಸೇರಿದಂತೆ ಕಾಲೇಜಿನ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.