ಸಮಾನತೆಯ ಸಮಾಜ ನಿರ್ಮಾಣ ಡಾ.ಅಂಬೇಡ್ಕರ್ ಕನಸು: ಶ್ರೀಕಾಂತ್ ರಾವಣ್

| Published : Dec 09 2024, 12:46 AM IST

ಸಮಾನತೆಯ ಸಮಾಜ ನಿರ್ಮಾಣ ಡಾ.ಅಂಬೇಡ್ಕರ್ ಕನಸು: ಶ್ರೀಕಾಂತ್ ರಾವಣ್
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಧರ್ಮ ಲಿಂಗಾಧಾರಿತ ಶೋಷಣೆಯಿಂದ ಸಮಾನತೆಯ ಸಮಾಜ ನಿರ್ಮಾಣ ಅಂಬೇಡ್ಕರ್ ಕನಸಾಗಿತ್ತು. ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನ ರೂಪದಲ್ಲಿ ಸಮಾಜಕ್ಕೆ ಧಾರೆ ಎರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ನವ ಸಮಾಜ ನಿರ್ಮಿಸುವ ದೃಷ್ಟಿಯಿಂದ ಸಂವಿಧಾನ ರಚಿಸಿದ್ದು ಅವರ ಕನಸು ನನಸು ಮಾಡುವಂತಹ ಕಾರ್ಯ ಆಗಬೇಕು ಎಂದು ಭೀಮ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ನಗರದ ಗೌತಮ್ ಕಾಲೋನಿಯಿಂದ ತಾಲೂಕು ಕಚೇರಿವರೆಗೆ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಅವರ ಸಂಗ್ರಹ ಚಿತ್ರಗಳ ಹೊತ್ತ 100 ಆಟೋಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಬಾಬಾ ಸಾಹೇಬರು ಪ್ರಜಾಸತ್ತಾತ್ಮಕ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಜೀವನವಿಡೀ ಹೋರಾಟ ಮಾಡಿದವರು. ಸೌಹಾರ್ದತೆ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದರು. ದೇಶಕ್ಕೆ ಪ್ರಗತಿಪರ ಹಾಗೂ ನ್ಯಾಯ ಕೇಂದ್ರಿತ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದು, ಸಂವಿಧಾನದಡಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಮನೆಯಲ್ಲಿ ಪ್ರತಿದಿನ ಪೂಜಿಸಬೇಕು. ಇಲ್ಲದಿದ್ದರೆ ಅವರ ಜೀವನ ಕೂಡ ವ್ಯರ್ಥ ಎಂದರು.

ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಶೋಕ್ ಮಾತನಾಡಿ, ಜಾತಿ, ಧರ್ಮ ಲಿಂಗಾಧಾರಿತ ಶೋಷಣೆಯಿಂದ ಸಮಾನತೆಯ ಸಮಾಜ ನಿರ್ಮಾಣ ಅಂಬೇಡ್ಕರ್ ಕನಸಾಗಿತ್ತು. ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನ ರೂಪದಲ್ಲಿ ಸಮಾಜಕ್ಕೆ ಧಾರೆ ಎರೆದಿದ್ದಾರೆ ಎಂದರು.

ಸಿಲಿಕಾನ್ ಸಿಟಿ ಆಸ್ಪತ್ರೆಯ ವೈದ್ಯ ಡಾ.ಸುಪ್ರೀತ್, ಭೀಮ್ ಸೇವಾ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಗಂಗಾಧರ್‌ ಬಿ.ಜಿ., ಆಟೋ ಘಟಕದ ರಾಜ್ಯಾಧ್ಯಕ್ಷ ಮೂರ್ತಿ ಚಿರಿ, ಜಿಲ್ಲಾಧ್ಯಕ್ಷ ಬಾಲಚಂದ್ರ ಬಾಲು, ಪ್ರ.ಕಾರ್ಯದರ್ಶಿ ಮುನಿರಾಜು, ಕಾರ್ಯದರ್ಶಿ ವರುಣ್ ರಾಜ್ ಚಕ್ರವರ್ತಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸೂರ್ಯ ಸೂರಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.