ಡಾ. ಅನಿಲ್‌ ಚಂಗಪ್ಪ ಸಮಾಜದ ದಿವ್ಯ ಶಕ್ತಿ

| Published : Jul 03 2025, 11:49 PM IST

ಸಾರಾಂಶ

ಈಗಲೂ ಸೇವಾ ನಿರತರಾಗಿರುವ ಅನಿಲ್‌ ಚಂಗಪ್ಪ ಜು. 4ಕ್ಕೇ 55 ವರ್ಷಗಳ ಸೇವೆಯ ಸುಂದರ ವಸಂತ ಕಾಣುತ್ತಿದ್ದಾರೆ.

ಮಡಿಕೇರಿ: ಒಬ್ಬ ವ್ಯಕ್ತಿ ಒಂದು ದಿವ್ಯ ಶಕ್ತಿಯಾಗಿ ಬೆಳಗುತ್ತಾರೆ ಅಷ್ಟೇ ಅ್ಲಲದೇ ಈ ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕಾಗಿದ್ದಾರೆ ಎನ್ನುವುದಕ್ಕೆ ಮಡಿಕೇರಿಯ ಡಾ. ಅನಿಲ್‌ ಚಂಗಪ್ಪರವರು ಸ್ಪಷ್ಟ ನಿದರ್ಶನ. ತಮ್ಮ ಜೀವಿತದ 50 ಸಂವತ್ಸರಗಳ ಕಾಲ ದಂತ ವೈದ್ಯರಾಗಿ ಜನ ಸಾಮಾನ್ಯರ ಸೇವೆ ಸಲ್ಲಿಸಿ ಈಗಲೂ ಸೇವಾ ನಿರತರಾಗಿರುವ ಅನಿಲ್‌ ಚಂಗಪ್ಪ ಜು. 4ಕ್ಕೇ 55 ವರ್ಷಗಳ ಸೇವೆಯ ಸುಂದರ ವಸಂತ ಕಾಣುತ್ತಿದ್ದಾರೆ.

ಮಡಿಕೇರಿಯಲ್ಲಿ ದಂತ ವೈದ್ಯರಾಗಿ ಸೇವೆ ಪ್ರಾರಂಭಿಸಿದ ಇವರು ನಗರದ ವಿವಿಧ ಸೇವಾ ಸಂಸ್ಥೆಗಳಲ್ಲಿ ತಮ್ಮ ಸೇವೆಯನ್ನು ಧಾರೆಯೆರೆದು ಆದರ್ಶಪ್ರಾಯರಾಗಿರುವುದು ಇವರ ಹೆಗ್ಗಳಿಕೆ. ಡಾ. ಅನಿಲ್‌ ಚಂಗಪ್ಪರವರು 1970 ಜುಲೈ 4ಕ್ಕೆ ಮಡಿಕೇರಿಯಲ್ಲಿ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿದರು.

ಮೊಟ್ಟಮೊದಲು ನಗರದ ಪುರಭವನದ ಸನಿಹದ ಕಟ್ಟಡದಲ್ಲಿ ಇವರು ತಮ್ಮ ದಂತ ವೈದ್ಯಕೀಯ ಸೇವೆ ಪ್ರಾರಂಭಿಸಿದರು. ಬಳಿಕ ಸ್ಪಲ್ಪ ಸಮಯದಲ್ಲಿಯೇ ಖಾದಿ ಭಂಡಾರದ ಕಟ್ಟಡಕ್ಕೆ ಸ್ಥಳಾಂತರಗೊಂಡರು. ಈ ಸಂದರ್ಭ ಇವರನ್ನು ರೋಟರಿ ಸೇವಾ ಸಂಸ್ಥೆಯವರು ಇವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಾ ಸಂಸ್ಥಾನಕ್ಕೆ ಕಳುಹಿಸಿದರು. ಈ ರಾಷ್ಟ್ರದಿಂದ ಮರಳಿದ ಡಾ. ಅನಿಲ್‌ ಚಂಗಪ್ಪ ರವರು ಎಂದಿನಂತೆ ನಗರದಲ್ಲಿ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿದರು. ಆದರ್ಶ ಸೇವೆಗೆ ಫಲ ಇದೆ ಎಂಬಂತೆ 1985ರಲ್ಲಿ ಇವರನ್ನು ರೋಟರಿ ಸೇವಾ ಸಂಸ್ಥೆಯವರು ಮೂರು ತಿಂಗಳ ಅಧ್ಯಯನಕ್ಕಾಗಿ ವೆಸ್ಟ್‌ ಇಂಡಿಸ್‌ಗೆ ಕಳುಹಿಸಿ ದಂತ ಕ್ಷೇತ್ರದ ನಾಮನಿರ್ದೇಶನ ಮಾಡಿದರು. ಅಲ್ಲಿಂದ ಮರಳಿದ ಇವರು ಇಂದಿನವರೆಗೂ ಮಡಿಕೇರಿಯ ಖಾದಿ ಭಂಡಾರದ ತಮ್ಮ ಸ್ವಂತ ಕಟ್ಟಡದಲ್ಲಿ ಸೇವಾ ನಿರತರಾಗಿದ್ದಾರೆ. ಖಾಸಗಿ ವೈದ್ಯರಾದರೂ ತಮ್ಮಲ್ಲಿಗೆ ಬಂದ ಅಸಹಾಯಕರಿಗೆ ಉಚಿತ ನೆರವಿನ ಉದಾರತೆಯನ್ನು ತೋರಿಸುತ್ತಿರುವುದು ಇವರ ದೊಡ್ಡಗುಣ.ಡಾ. ಅನಿಲ್‌ ಚಂಗಪ್ಪರವರು ನಗರದ ಜನಾನುರಾಗಿ ಮೂಡೇರ ಡಾ. ಅಯ್ಯಪ್ಪ ಪೊನ್ನಮ್ಮರವರ ಸುಪುತ್ರರು.