ಸಾರಾಂಶ
ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಜು.9 ರಿಂದ ಜು.12 ರವರೆಗೆ ನಡೆದ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿಯ 1ನೇ ಅಂತಾರಾಷ್ಟ್ರೀಯ ಮತ್ತು 23ನೇ ರಾಷ್ಟ್ರೀಯ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿ.ಕೆ.ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಉಪಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕ ಡಾ.ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಜು.9 ರಿಂದ ಜು.12 ರವರೆಗೆ ನಡೆದ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿಯ 1ನೇ ಅಂತಾರಾಷ್ಟ್ರೀಯ ಮತ್ತು 23ನೇ ರಾಷ್ಟ್ರೀಯ ಸ್ನಾತಕೋತ್ತರ ಸಮಾವೇಶದಲ್ಲಿ ಬೆಳಗಾವಿಯ ಕೆಎಲ್‌ಇ ವಿ.ಕೆ.ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಉಪಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕ ಡಾ.ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಸಮಗ್ರ ಮಾರ್ಗವಾದ ಪೋರ್ಟ್ಫೋಲಿಯೋ ಕುರಿತು ಪ್ರಬಂಧ ಮಂಡಿಸಿದರು. ವೈಜ್ಞಾನಿಕ ಪ್ರಸ್ತುತಿಯನ್ನು ಪ್ರಶಂಸಿಸಲಾಯಿತು. ಡಾ.ಅಂಜನಾ ಅವರ ಯಶಸ್ಸು ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಕ್ಕಾಗಿ ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ, ಡೀನ್ ಡಾ.ವಿನಾಯಕ್ ಕುಂಬೋಜ್ಕರ್, ವಿಭಾಗದ ಮುಖ್ಯಸ್ಥೆ ಡಾ.ವೈಶಾಲಿ ಕೆಲುಸ್ಕರ್ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.