ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ ಹೃದಯವಾಹಿನಿ, ಶ್ರೀ ಮಂಜುನಾಥ ಎಜುಕೇಶನ್ ಟ್ರಸ್ಟ್ ಮತ್ತು ಅಂಡಮಾನ್ ಕನ್ನಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಎಸ್ಸಾರ್ ಕ್ಯಾಸಲ್ ಸಭಾಂಗಣ ಪೋರ್ಟ್‌ಬ್ಲೇರ್ ಅಂಡಮಾನ್‌ನಲ್ಲಿ ಜೂ.15 ರಂದು ನಡೆಯಲಿರುವ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಅಥಣಿಯ ಖ್ಯಾತ ಸಾಹಿತಿ, ಶಿಕ್ಷಕಿ ಡಾ.ಅರ್ಚನಾ ಅಥಣಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ಹೃದಯವಾಹಿನಿ, ಶ್ರೀ ಮಂಜುನಾಥ ಎಜುಕೇಶನ್ ಟ್ರಸ್ಟ್ ಮತ್ತು ಅಂಡಮಾನ್ ಕನ್ನಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಎಸ್ಸಾರ್ ಕ್ಯಾಸಲ್ ಸಭಾಂಗಣ ಪೋರ್ಟ್‌ಬ್ಲೇರ್ ಅಂಡಮಾನ್‌ನಲ್ಲಿ ಜೂ.15 ರಂದು ನಡೆಯಲಿರುವ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಅಥಣಿಯ ಖ್ಯಾತ ಸಾಹಿತಿ, ಶಿಕ್ಷಕಿ ಡಾ.ಅರ್ಚನಾ ಅಥಣಿ ಆಯ್ಕೆಯಾಗಿದ್ದಾರೆ.ಈ ಸಮ್ಮೇಳನವು ಪ್ರತಿವರ್ಷ ವಿವಿಧ ರಾಜ್ಯಗಳ ಕನ್ನಡ ಸಂಘಗಳ ಸಹಯೋಗದೊಂದಿಗೆ ಆಯಾ ರಾಜ್ಯಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ನವದೆಹಲಿ, ಪಣಜಿ, ವಾಪಿ, ಸೂರತ್, ಮುಂಬೈ, ಕಾಸರಗೋಡು, ಕೊಚ್ಚಿನ್, ಬರೋಡ್ ಮುಂದಾದ ಕಡೆಗಳಲ್ಲಿ ಜರುಗಿದೆ. ಈ ಸಮ್ಮೇಳನದಲ್ಲಿ ಕರ್ನಾಟಕ ಮತ್ತು ವಿವಿಧ ರಾಜ್ಯಗಳ ಕನ್ನಡ ಸಂಘಟಕರು ಕವಿಗಳು, ಕಲಾವಿದರು ಮತ್ತು ಕನ್ನಡಪರ ಚಿಂತಕರು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿಕ್ಷಕಿ ಡಾ.ಅರ್ಚನಾ ಅಥಣಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನ ಗುರುತಿಸಿ ಸಮ್ಮೇಳನದ ಸಮಿತಿಯು ಇವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಸಮ್ಮೇಳನ ಅಧ್ಯಕ್ಷರಾಗಿರುವ ಡಾ.ಅರ್ಚನಾ ಅಥಣಿಯವರಿಗೆ ಅಥಣಿ ಸಾಹಿತಿಕ ಬಳಗ ಮತ್ತು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.