ಸಾರಾಂಶ
ತರೀಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣೆ। ಮಾಹಿತಿ-ಜಾಗೃತಿ ಶಿಬಿರಕನ್ನಡಪ್ರಭ ವಾರ್ತೆ, ತರೀಕೆರೆ
ಬೆನ್ನುಹುರಿ ಮತ್ತು ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಚಂದ್ರಶೇಖರ್ ಹೇಳಿದ್ದಾರೆ.ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು, ತರೀಕೆರೆ ತಾಲೂಕು ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಚಿಕ್ಕಮಗಳೂರು ಸೇವಾಭಾರತಿ-ಸೇವಾಧಾಮ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ, 31ನೇ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಡೆದ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇದು ಬಹಳ ವಿಶೇಷ ಕಾರ್ಯಕ್ರಮ. ಇದು 2ನೇ ಶಿಬಿರವಾಗಿದ್ದು ಮರ ಹತ್ತುವಾಗ ಬಿದ್ದು, ರಸ್ತೆ ಅಪಘಾತಗಳಲ್ಲಿ ಉಂಟಾಗುವ ಬೆನ್ನು ಹುರಿ ಸಮಸ್ಯೆಗೆ (ಸ್ಪೈನಲ್ ಕಾರ್ಡ್ ) ಸೂಕ್ತ ಚಿಕಿತ್ಸೆ ಪಡೆಯಬೇಕು. ಬೆನ್ನುಹುರಿ ದೀರ್ಘಕಾಲಿಕ ಸಮಸ್ಯೆ ದೇಶದಲ್ಲಿ ಪ್ರತಿ ಹತ್ತು ಲಕ್ಷಕ್ಕೆ ಅಂದಾಜು 20 ಜನರು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ದೀರ್ಘ ಕಾಲದ ಸಮಸ್ಯೆ ಎದುರಿಸುತ್ತಿದ್ದಾರೆ ಇವರಿಗೆ ಚಿಕಿತ್ಸೆ ಮತ್ತು ಆರೈಕೆ ಅಗತ್ಯವಿದೆ ಎಂದು ಹೇಳಿದರು. ಚಿಕ್ಕಮಗಳೂರು ಸೇವಾಭಾರತಿ-ಸೇವಾಧಾಮ ಸಂಸ್ಥೆ ಇಂತಹವರನ್ನು ಗುರುತಿಸಿ ಉಚಿತ ತಪಾಸಣೆ ಚಿಕಿತ್ಸೆ ನೀಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ತರೀಕೆರೆ ರೋಟರಿ ಯಿಂದ ಸೇವಾಭಾರತಿ-ಸೇವಾಧಾಮ ಸಂಸ್ಥೆಗೆ ₹20 ಸಾವಿರ ನೆರವು ನೀಡಲಾಗುತ್ತಿದೆ. ಶಿಬಿರದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಉಚಿತ ವೈದ್ಯಕೀಯ ತಪಾಸಣೆ ಜೊತೆಗೆ ಯೋಗ, ಪ್ರಾಣಾಯಮ, ಒತ್ತಡ, ಗಾಯ ನಿರ್ವಹಣೆ ಆಪ್ತ ಸಮಾಲೋಚನೆ, ಹಮ್ಮಿಕೊಳ್ಳಲಾಗಿದೆ. ಆರ್ಹರಿಗೆ ಮೆಡಿಕಲ್ ಕಿಟ್, ಸೆಲ್ಪ್ ಕೇರ್ ಕಿಟ್, ಗಾಳಿ ನೀರಿನ ಹಾಸಿಗೆ ನೀಡಲಾಗುತ್ತಿದೆ ಎಂದು ಹೇಳಿದರು.ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚನ್ನಬಸಪ್ಪ ಎಂ.ಜೆ. ಮಾತನಾಡಿ ಮರ ಮತ್ತು ಲೈಟ್ ಕಂಬ ಹತ್ತುವಾಗ ಬಿದ್ದಾಗ ಬೆನ್ನಿನ ಸ್ಪೈನಲ್ ಕಾರ್ಡ್ ಕಟ್ ಆದರೆ ನಡೆಯಲು ಆಗಲ್ಲ, ಇಂತಹವರಿಗೆ ಚಿಕಿತ್ಸೆ ನೀಡುವುದು ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ವಲಯ 7 ಸಹಾಯಕ ಗವರ್ನರ್ ಪ್ರವೀಣ ನಾಹರ್ ಟಿ.ಎಂ. ರೋಟರಿ ಕ್ಲಬ್ ಅಧ್ಯಕ್ಷ ರವಿ ಕುಮಾರ್ ಬಿ.ಪಿ, ಕಾರ್ಯದರ್ಶಿ ಪ್ರವೀಣ್ ಡಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಜಿಲ್ಲಾ ಸಂಯೋಜಕ ರಾಬರ್ಟ್, ಸದಸ್ಯ ಬಿ.ಕೆ.ಮಂಜುನಾಥ್, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.-
12ಕೆಟಿಆರ್.ಕೆ.4ಃ.ತರೀಕೆರೆಯಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಉದ್ಘಾಟಿಸಿದರು. ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಚನ್ನಬಸಪ್ಪ ಎಂ.ಜೆ. ರೋಟರಿ ಕ್ಲಬ್ ಅಧ್ಯಕ್ಷ ರವಿ ಕುಮಾರ್ ಬಿ.ಪಿ. ಕಾರ್ಯದರ್ಶಿ ಪ್ರವೀಣ್ ಡಿ. ಸದಸ್ಯ ಬಿ.ಕೆ.ಮಂಜುನಾಥ್ ಮತ್ತಿತರರು ಇದ್ದರು.