ಡಾ.ಬಿ.ಆರ್‌. ಅಂಬೇಡ್ಕರ್ ಚಿಂತನೆಗಳು ಮನೆ ಮನೆಗೂ ತಲುಪಬೇಕು

| Published : Sep 19 2025, 01:00 AM IST

ಡಾ.ಬಿ.ಆರ್‌. ಅಂಬೇಡ್ಕರ್ ಚಿಂತನೆಗಳು ಮನೆ ಮನೆಗೂ ತಲುಪಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ದಂಡಿನಶಿವರ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ಬದುಕಿನ ಆದರ್ಶಗಳು ಮತ್ತು ಹೋರಾಟಗಳು ಪ್ರತಿ ಮನೆ ಮನೆಗೂ ತಲುಪಬೇಕು ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.

ತಾಲೂಕಿನ ದಂಡಿನಶಿವರ ಹೋಬಳಿಯ ಮಾಚೇನಹಳ್ಳಿ ಗ್ರಾಮದಲ್ಲಿ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ರವರ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ ಎಂದರು. ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಸಂಘಟನೆ, ಶಿಕ್ಷಣ ಮತ್ತು ಹೋರಾಟದ ಶಕ್ತಿಯಿಂದ ಮಾತ್ರವೇ ಸಂವಿಧಾನ ನೀಡಿರುವ ಹಕ್ಕುಬಾಧ್ಯತೆಗಳನ್ನು ಪಡೆದುಕೊಳ್ಳಲು, ತುಳಿತಕ್ಕೊಳಗಾಗಿರುವ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ನಂಬಿದ್ದರು. ಹಾಗಾಗಿ ದಲಿತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ದಂಡಿನಶಿವರ ಕುಮಾರ್‌ ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ ನಾಗತಿಹಳ್ಳಿ, ನರಸಿಂಹ ಮೂರ್ತಿ ಅಗಸರಹಳ್ಳಿ, ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕರಾದ ಲಾವಣ್ಯ ಗುಬ್ಬಿ, ತಾಲ್ಲೂಕು ಸಂಘಟನಾ ಸಂಚಾಲಕಿ ಸಂಧ್ಯಾ, ಸಂಘಟನಾ ಸಂಚಾಲಕರುಗಳಾದ ಬೋರಪ್ಪ, ಗೋವಿಂದರಾಜು, ಲಕ್ಷ್ಮೀಶ್, ರಾಮಚಂದ್ರ, ಮಧು ಸಿದ್ದಾಪುರ, ಕೆಂಪಯ್ಯ, ಶಿವಣ್ಣ ಮುತ್ತುಗದಹಳ್ಳಿ, ವಿನಯ್, ಸಂತೋಷ್, ಹುಲ್ಲೇಕೆರೆ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಚಿಕ್ಕನಾಯಕನಹಳ್ಳಿ ಸಂಚಾಲಕ ಲಿಂಗರಾಜು, ಸಂಘಟನಾ ಸಂಚಾಲಕ ಗೋಪಾಲ್, ಅಲ್ಪಸಂಖ್ಯಾತಕರ ಘಟಕದ ತಾಲೂಕು ಸಂಚಾಲಕ ಅಫ್ಜಲ್, ಹೊನ್ನೇನಹಳ್ಳಿ ಕೃಷ್ಣ, ತಿಪಟೂರು ಸಂಚಾಲಕ ಅರಚನಹಳ್ಳಿ ಮಂಜುನಾಥ, ನಾರಾಯಣ್, ಉಪಸ್ಥಿತರಿದ್ದರು.

18 ಟಿವಿಕೆ 3 – ತುರುವೇಕೆರೆ ತಾಲೂಕು ಮಾಚೇನಹಳ್ಳಿಯಲ್ಲಿ ದಲಿತ ಸಂಘರ್ಷ ಸಮಿತಿಯ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು.