ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಮಹಾನ್ ಚೇತನ

| Published : Aug 29 2025, 01:00 AM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಮಹಾನ್ ಚೇತನ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಮಹಾನ್ ಚೇತನ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರುನಗರದ ಭುವನೇಶ್ವರಿ ವೃತ್ತದಲ್ಲಿರುವ ಪಚ್ಚಪ್ಪ ಬಿಲ್ಡಿಂಗ್ ನ ೨ನೇ ಮಹಡಿಯಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಕ್ರಾಂತಿ ಸೇನೆ ರಾಜ್ಯ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು,

ಭಾರತ ದೇಶದಲ್ಲಿ ಸುಮಾರು ೧೦ ಲಕ್ಷ ಕ್ಕೂ ಹೆಚ್ಚು ಅಂಬೇಡ್ಕರ್ ಅವರ ಹೆಸರಿನಲ್ಲಿ ಸಂಘಟನೆಗಳಿವೆ. ಅವರ ಹೆಸರಿನಲ್ಲಿ ಸಮಾನತೆ, ಸಹಬಾಳ್ವೆ, ಐಕ್ಯತೆ, ಶ್ರೇಷ್ಠತೆ ಹಾಗೂ ಸಾರ್ವಭೌಮತೆ ಹೊಂದಿದೆ. ದೇಶದ ಐಕ್ಯತೆಗೆ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಕಾರಣವಾಗಿದೆ. ಅಲ್ಲದೆ ನಾವೆಲ್ಲರೂ ಸಮಾನರು ಹಾಗೂ ಸಹಬಾಳ್ವೆಯಿಂದ ಬದುಕಬೇಕು ಎಂದು ತಿಳಿಸುತ್ತದೆ. ನಾನು ಅಂಬೇಡ್ಕರ್ ಅವರ ಕುಟುಂಬದ ಜೊತೆ ನಿಕಟವಾಗಿ ಸಂಪರ್ಕದಲ್ಲಿದ್ದೇನೆ, ಅವರ ಕುಟುಂಬದವರು ಉನ್ನತ ಹುದ್ದೆಯಲ್ಲಿದ್ದರೂ ಸರಳವಾಗಿ ಬದುಕುತ್ತಿದ್ದಾರೆ,

ಅಂಬೇಡ್ಕರ್ ಅವರು ಬಳಸುತ್ತಿದ್ದ ಪೆನ್ನು, ಕೋಟ್ ಸೇರಿದಂತೆ ಇತರೆ ವಸ್ತುಗಳನ್ನು ಮ್ಯೂಸಿಯಂಗಳಿಗೆ ನೀಡಿ ಭಾರತ ದೇಶದ ಜನ ಅವುಗಳನ್ನು ಸ್ಪರ್ಶಿಸಿ ಇಂತಹ ಮಹಾನ್ ಚೇತನ ನಮ್ಮ ದೇಶದಲ್ಲಿ ಹುಟ್ಟಿರುವುದು ತುಂಬಾ ಸಂತೋಷ ಎಂದು ಹೆಮ್ಮೆಪಡುತ್ತಿದ್ದಾರೆ. ಇಂಥವರ ಹೆಸರಿನ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಇರಸವಾಡಿ ಸಿದ್ದಪ್ಪಾಜಿ ಅವರು ಸಂಘಟನೆ ಬಲಪಡಿಸಲು ನಮ್ಮ ಸಹಕಾರವು ಎಂದೆಂದೂ ಇರುತ್ತದೆ ಎಂದು ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ದೇಶದಲ್ಲಿ ಎಲ್ಲರಿಗೂ ಅಂಬೇಡ್ಕರ್ ಸಮಾನತೆ ನೀಡಿದ್ದಾರೆ, ಈ ಅಂಬೇಡ್ಕರ್ ಕ್ರಾಂತಿ ಸೇನೆ ಸಂಘಟನೆ ಇಡೀ ಜಿಲ್ಲೆಗೆ ದಾರಿದೀಪವಾಗುತ್ತಿದೆ, ಅದನ್ನು ಒಳ್ಳೆ ರೀತಿಯಲ್ಲಿ ಸಂಘಟಿಸಿ ಬಡವರಿಗೆ, ದೀನ ದಲಿತರಿಗೆ, ನೊಂದವರಿಗೆ ನ್ಯಾಯ ಒದಗಿಸುವಂತಹ ಕೆಲಸವಾಗಬೇಕು. ಒಂದು ಸಂಘಟನೆಯನ್ನು ಹುಟ್ಟು ಹಾಕುವುದು ಸುಲಭ, ಆದರೆ ಅದನ್ನು ಭ್ರಷ್ಟಚಾರ ರಹಿತವಾಗಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಮುಖ್ಯ. ಸಂಘಟನೆಯ ಜೊತೆಗೆ ಇಲ್ಲಿ ಕೋಚಿಂಗ್ ಸೆಂಟರ್ ನಡೆಸಿ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ತರಬೇತಿ ನೀಡಬೇಕು, ಅಂಬೇಡ್ಕರ್ ಅವರ ಆಶಯದಂತೆ ಒಳ್ಳೆಯ ಹೋರಾಟಗಳನ್ನು ಮಾಡಿ ಅವರ ಹೆಸರಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಂಘಟನೆಯ ಮುಖಂಡರಾದ ಹಾಸನ ಜಿಲ್ಲೆಯ ಯೋಗಶೆಟ್ಟಿ, ಅನಿಲ್ ಕುಮಾರ್ ಅವರು ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಿಸಿದರು. ಇದೆ ವೇಳೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ಸುರೇಶ್‌ಗೌಡ ಹಾಗೂ ಇರಸವಾಡಿ ಸಿದ್ದಪ್ಪಾಜಿ ಅವರು ಮಾತನಾಡಿದರು

ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಇರಸವಾಡಿ ಸಿದ್ದಪ್ಪಾಜಿ.ಪಿ, ಎಸ್‌ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಗೌರವಾಧ್ಯಕ್ಷ ಸುರೇಶ್ ಗೌಡ, ಅಧ್ಯಕ್ಷ ಎಚ್.ಎಂ ಶಿವಣ್ಣ ಮಂಗಲ ಹೊಸೂರು, ಕಲಾವಿದರಾದ ಚಂದಕವಾಡಿ ರಾಜಣ್ಣ, ನಾಗಮಹದೇವ್, ದೊರೆರಾಜು ಆಲೂರು, ಮುತ್ತು, ರಂಗಸ್ವಾಮಿ ಕಾಗಲವಾಡಿ, ಸಂಘಟನೆಯ ಮುಖಂಡರಾದ ಹಾಸನ ಜಿಲ್ಲೆಯ ಯೋಗಶೆಟ್ಟಿ, ಅನಿಲ್ ಕುಮಾರ್, ಸಿಂಗನಪುರ ಸೋಮು, ಜ್ಯೋತಿ, ನಾಗೇಶ್ ಭೋಗಾಪುರ, ಹಿದಾಯತ್ ಉಲ್ಲಾ ಷರೀಫ್, ಪ್ರಭು ಕೋಟಂಬಳ್ಳಿ, ಗೌರಿಶಂಕರ್, ಜಡೇ ಮಾದೇಗೌಡ ಇದ್ದರು.