ಡಾ.ಅಂಬೇಡ್ಕರ್ ಭವನ‌ ಪೂರ್ಣಗೊಳಿಸಲು ಆಗ್ರಹ

| Published : Mar 04 2025, 12:34 AM IST

ಸಾರಾಂಶ

ಡಾ. ಅಂಬೇಡ್ಕರ್ ಭವನ ಕಾಮಗಾರಿ 2011- 12ರಲ್ಲಿ ಆರಂಭವಾಗಿ 13- 14 ವರ್ಷಗಳಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ದಿವಾನ್ಸ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ‌ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ಶೀಘ್ರದಲ್ಲೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಪ್ರಬುದ್ಧ ಭಾರತ ಭೀಮ್ ಸೇನೆಯವರು ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ಡಾ. ಅಂಬೇಡ್ಕರ್ ಭವನ ಕಾಮಗಾರಿ 2011- 12ರಲ್ಲಿ ಆರಂಭವಾಗಿ 13- 14 ವರ್ಷಗಳಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಈ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಸಮ್ಮಿಶ್ರ ಸರ್ಕಾರಗಳು ಆಡಳಿತ ನಡೆಸಿದ್ದು, ಯಾವೊಂದು ಸರ್ಕಾರವೂ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಒದಗಿಸಿ ಕೊಡುವಲ್ಲಿ ವಿಫಲವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳೂ ಅಂಬೇಡ್ಕರ್ ಭವನ ಪೂರ್ಣಗೊಳಿಸಲು ಆಸಕ್ತಿ ತೋರಿಸದೆ ಕಡೆಗಣಿಸಿವೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ವಿಶೇಷ ಅನುದಾನದಡಿ ಮೀಸಲಿರಿಸಿ, ಮುಂಬರುವ ಅಂಬೇಡ್ಕರ್ ಜಯಂತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಉದ್ದೇಶಕ್ಕೆ ಲೋಕಾರ್ಪಣೆ ಮಾಡಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.ಪ್ರಬುದ್ಧ ಭಾರತ ಭೀಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ದರಾಜು, ಮುಖಂಡರಾದ ಸುರೇಶ್, ಪ್ರಭಾಕರ್, ಆರ್. ಸಿದ್ದಪ್ಪ, ರಾಮು, ಮಂಜುನಾಥ್, ಸುರೇಶ್, ರಂಗಸ್ವಾಮಿ, ಜವರಪ್ಪ, ನಿಂಗರಾಜು, ಚಲುವರಾಜು, ಶೇಖರ್, ವೆಂಕಟೇಶ್, ಪ್ರಕಾಶ್, ಸಣ್ಣಯ್ಯ, ನಾಗೇಶ್, ಶ್ರೀನಿವಾಸ್, ವನಜಾಕ್ಷಿ ಮೊದಲಾದವರು ಇದ್ದರು.