ಡಾ. ಬಾಬು ಜಗಜೀವನರಾಂ ಶೋಷಿತರ ಧ್ವನಿ: ಪ್ರಕಾಶ ಪೂಜಾರ

| Published : Jul 07 2025, 11:48 PM IST

ಡಾ. ಬಾಬು ಜಗಜೀವನರಾಂ ಶೋಷಿತರ ಧ್ವನಿ: ಪ್ರಕಾಶ ಪೂಜಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಸಚಿವರಾಗಿ ವಿವಿಧ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಜಗಜೀವನರಾಂ ಕಾರ್ಮಿಕರಿಗೆ ಕಾಂತ್ರಿಕಾರಿ ಬೆಳವಣಿಗೆ ತಂದರು.

ರಾಣಿಬೆನ್ನೂರು: ಡಾ. ಬಾಬು ಜಗಜೀವನರಾಂ ತಮ್ಮ ಜೀವನದುದ್ದಕ್ಕೂ ಶೋಷಿತರ ಪರ ಗಟ್ಟಿ ಧ್ವನಿಯಾಗಿ ನಿಂತಿದ್ದರು ಎಂದು ನಗರಸಭಾ ಸದಸ್ಯ ಪ್ರಕಾಶ ಪೂಜಾರ ತಿಳಿಸಿದರು.ನಗರದ ಕೂನಬೇವು ರಸ್ತೆಯ ಬಾಬು ಜಗಜೀವನರಾಂ ಸಭಾಭವನದಲ್ಲಿ ಸೋಮವಾರ ಸ್ಥಳೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಸಚಿವರಾಗಿ ವಿವಿಧ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಜಗಜೀವನರಾಂ ಕಾರ್ಮಿಕರಿಗೆ ಕಾಂತ್ರಿಕಾರಿ ಬೆಳವಣಿಗೆ ತಂದರು ಎಂದರು.ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ತಮ್ಮ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಎದುರಿಸಿದ ಜಗಜೀವನರಾಂ ಅವರು ಊರಿನಿಂದ ಊರಿಗೆ ಅಲೆಯುತ್ತಾ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರು. ಅವರು ಹೊಸ ಕೃಷಿ ನೀತಿ ಜಾರಿಗೆ ತರುವ ಮೂಲಕ ಹತ್ತು ವರ್ಷ ಆಹಾರ ಬೆಳೆಯದೆ ಹೋದರೂ ದೇಶಕ್ಕೆ ಸಾಕಾಗಷ್ಟು ಆಹಾರ ದಾಸ್ತಾನು ಇರುವಂತಹ ವ್ಯವಸ್ಥೆ ಮಾಡಿದರು. ಕಾರ್ಮಿಕರಿಗೆ, ಯೋಧರಿಗೆ, ಅನೇಕ ಸೌಲಭ್ಯ ತಂದರು ಎಂದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಹಾನ್ ವ್ಯಕ್ತಿಗಳನ್ನು ನೆನೆಯಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಅದ್ದರಿಂದ ಎಲ್ಲರೂ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ವ್ಯಕ್ತಿ ಮುಖ್ಯವಲ್ಲ, ಅವರ ಮಾಡಿದ ಸಾಧನೆಯನ್ನು ಪರಿಗಣಿಸಬೇಕು ಎಂದರು. ಶಹರ ಪಿಎಸ್‌ಐ ಗಡ್ಡೇಪ್ಪ ಗುಂಜುಟಗಿ, ಮಾಲತೇಶ ಬ್ಯಾಡಗಿ, ಮೈಲಪ್ಪ ದಾಸಪ್ಪನವರ, ಸಂಜೀವ ಮಸಿಯಪ್ಪನವರ, ಮಲ್ಲೇಶಪ್ಪ ಮದ್ಲೇರ ಮತ್ತಿತರರಿದ್ದರು.ಅಕ್ರಮ ಪಡಿತರ ಅಕ್ಕಿ ವಶ

ರಾಣಿಬೆನ್ನೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡ ಹಿನ್ನೆಲೆಮೂವರು ವಿರುದ್ಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದ್ದು, 1350 ಕೆಜಿ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ನಗರದ ಜಾನುವಾರು ಮಾರುಕಟ್ಟೆಯ ಹತ್ತಿರದಲ್ಲಿ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡ 1350 ಕೆಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಗುರುರಾಜ ಉಪ್ಪಿನ, ಮಂಜುನಾಥ ಜಕ್ಕಪ್ಪನವರ, ಶರಣ ಓಲೇಕಾರ ಎಂಬುವರ ವಿರುದ್ಧ ಆಹಾರ ನಿರೀಕ್ಷಕ ಸ್ಟೀವನ್ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.