ಹಸಿರು ಕ್ರಾಂತಿ ಮಾಡಿದ ಡಾ. ಬಾಬು ಜಗಜೀವನರಾಂ: ಜಿ.ಕೆ. ಅಮರೇಶ

| Published : Apr 06 2025, 01:46 AM IST

ಹಸಿರು ಕ್ರಾಂತಿ ಮಾಡಿದ ಡಾ. ಬಾಬು ಜಗಜೀವನರಾಂ: ಜಿ.ಕೆ. ಅಮರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಟ್ಟೂರು ಪಟ್ಟಣದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಸಭಾಂಗಣದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎಲ್ಲರೂ ಪುಷ್ಪ ನಮನ ಅರ್ಪಿಸಿದರು.

ಕೊಟ್ಟೂರು: ಪಟ್ಟಣದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು.

ಸಭಾಂಗಣದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎಲ್ಲರೂ ಪುಷ್ಪ ನಮನ ಅರ್ಪಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ ಜಿ.ಕೆ. ಅಮರೇಶ ಮಾತನಾಡಿ, ಡಾ. ಬಾಬು ಜಗಜೀವನ ರಾಂ ಅವರು ಕೃಷಿ ಸಚಿವರಾಗಿದ್ದಾಗ ಕೃಷಿಯನ್ನು ಅಧುನಿಕರಿಸಿ, ಹಸಿರು ಕ್ರಾಂತಿ ಮಾಡಿದ್ದರು. ಕೇಂದ್ರದಲ್ಲಿ ಹಲವಾರು ಖಾತೆಗಳನ್ನು ಉತ್ತಮವಾಗಿ ನಿಭಾಯಿಸಿದ್ದರು. ಉಪ ಪ್ರಧಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 30 ವರ್ಷ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದರು. ದೇಶದ ಸಂವಿಧಾನ ಸಭೆಯ ಸದಸ್ಯರೂ ಆಗಿದ್ದರು. ಸರಳ ಸಜ್ಜಿನಿಕೆಯ ಬಾಬು ಅವರ ಆದರ್ಶಗಳನ್ನು ನಾವೆಲ್ಲ ರೂಢಿಸಿಕೊಳ್ಳಬೇಕು ಎಂದರು.

ಡಿಎಸ್‌ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ, ತಗ್ಗಿನಕೇರಿ ಕೊಟ್ರೇಶ, ಟಿ. ಹನುಮಂತಪ್ಪ, ಪಪಂ ಉಪಾಧ್ಯಕ್ಷ ಜಿ. ಸಿದ್ದಯ್ಯ ಅವರು ಬಾಬು ಜಗಜೀವನರಾಂ ಅವರು ಬದುಕು, ರಾಜಕೀಯ, ಆದರ್ಶಗಳ ಕುರಿತು ಮಾತನಾಡಿದರು.

ತಾಪಂ ಇಒ ಡಾ. ಬಿ. ಆನಂದಕುಮಾರ್, ಡಿಟಿ ಅನ್ನದಾನೇಶ ಬಿ. ಪತ್ತಾರ, ಜೆಸ್ಕಾಂ ಎಇ ಎಸ್. ಚೇತನ್, ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ, ಪಪಂ ಅಧ್ಯಕ್ಷೆ ಬದ್ದಿ ರೇಖಾರಮೇಶ, ಸದಸ್ಯ ಕೆಂಗರಾಜ, ಎಪಿಎಂಸಿ ಉಪಾಧ್ಯಕ್ಷ ಎಂ. ಶಿವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬಿ. ದುರುಗಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಭರಮಣ್ಣ, ಜಯಪ್ರಕಾಶನಾಯ್ಕ, ವೈದ್ಯಾಧಿಕಾರಿ ಡಾ. ಬದ್ಯಾನಾಯ್ಕ, ಎಇ ಕೊಟ್ರೇಶ್, ಬಿಸಿಎಂನ ಟಿ. ವೀರೇಶ್, ಸದಾನಂದಯ್ಯ, ಶಿಕ್ಷಕ ಸಿ. ಅಜ್ಜಪ್ಪ, ಆರ್‌ಐ ಹಾಲಸ್ವಾಮಿ, ವಿವಿಧ ಸಂಘಟನೆಯ ಪದಾಧಿಕಾರಿಗಳು, ಇಲಾಖೆಗಳ ಸಿಬ್ಬಂದಿ ಇದ್ದರು. ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.