ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಿಂದ ಮಂಗಳವಾರ ಬಸವಲಿಂಗ ಪಟ್ಟದ್ದೇವರ 76ನೇ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯ ಬಡ ರೋಗಗಳಿಗೆ ಹಾಲು, ಹಣ್ಣು-ಹಂಪಲ ವಿತರಣೆ ಮಾಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಿಂದ ಮಂಗಳವಾರ ಬಸವಲಿಂಗ ಪಟ್ಟದ್ದೇವರ 76ನೇ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯ ಬಡ ರೋಗಗಳಿಗೆ ಹಾಲು, ಹಣ್ಣು-ಹಂಪಲ ವಿತರಣೆ ಮಾಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.

ಮಹಾತ್ಮ ಬಸವೇಶ್ವರರ ಪೂಜೆಯನ್ನು ಬ್ರೀಮ್ಸ್ ಆಸ್ಪತ್ರೆಯ ಆಯುಷ್‌ಮಾನ್‌ ಭಾರತ ವಿಭಾಗದ ಜಿಲ್ಲಾ ಸಂಯೋಜಕ ಡಾ.ಶಂಕರರಾವ ದೇಶಮುಖ ನೆರವೇರಿ ಸಿದರು. ಧಾರವಾಡದ ಚನ್ನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಡಾ.ದೇವಕಿ ನಾಗೂರೆ, ಶ್ರಾವಣ ಮಾಸ ಸೇವಾ ಸಮಿತಿಯ ಅಧ್ಯಕ್ಷರಾದ ಯೋಗೇಶ ಸಿರಿಗೇರೆ, ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಡಾ.ಸಂತೋಷ ಭಂಗೂರೆ, ಡಾ.ವೈಜಿನಾಥ ಬಿರಾದಾರ, ಪ್ರೊ.ಸಂಗ್ರಾಮ ಎಂಗಳೆ, ಪ್ರೊ.ಉಮಾಕಾಂತ ಮೀಸೆ, ಸಂಗ್ರಾಮಪ್ಪಾ ಬಿರಾದಾರ ಮತ್ತು ಬ್ರೀಮ್ಸ್ ಆಸ್ಪತ್ರೆಯ ಸಿಬ್ಬಂದಿಗಳಾದ ಸಂತೋಷ ಮುಚಳಂಬೆ, ಶ್ರೀನಿವಾಸ ವಗ್ಗೆ, ಅರುಣಕುಮಾರ, ಮಂಜುನಾಥ ಮತ್ತು ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ವಿದ್ಯಾರ್ಥಿ ಸಂಕೇತ, ಮಹೇಶ ಹಾಗೂ ಮುಂತಾದವರು ಉಪಸ್ಥಿತರಿದ್ದರು. ನಂತರ ಆಸ್ಪತ್ರೆಯ ಬಡ ರೋಗಿಗಳಿಗೆ ಹಾಲು, ಹಣ್ಣ-ಹಂಪಲ ವಿತರಿಸಲಾಯಿತು.