ಸಾರಾಂಶ
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲೆಯ 33 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲೆಯ 33 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗ ಎಚ್.ಡಿ. ಕೋಟೆ ತಾ. ಚಾಮಲಾಪುರದ ಎಸ್. ದೊರೆಸ್ವಾಮಿ, ಸರಗೂರು ತಾ. ನೆಟ್ಕಲ್ ಹುಂಡಿಯ ಚಿಕ್ಕನಾಯ್ಕ, ಹುಣಸೂರು ತಾ. ರಾಯನಹಳ್ಳಿಯ ಕೆ.ಎಸ್. ಮಂಜುಳಾ, ಕೆ.ಆರ್. ನಗರ ತಾ. ಕುಂಬಾರಕೊಪ್ಪಲಿನ ಕೃಷ್ಣನಾಯಕ, ಸಾಲಿಗ್ರಾಮ ತಾ. ಸಂಬ್ರವಳ್ಳಿಯ ಎಂ. ಜಯಸ್ವಾಮಿ, ಮೈಸೂರು ಉತ್ತರ ವಲಯದ ಮೋಮಿನ್ ನಗರದ ನವೀದಾ ಬಾನು, ಮೈಸೂರು ದಕ್ಷಿಣ ವಲಯದ ಹೊಸ ಇಟ್ಟಿಗೆಗೂಡಿನ ಎ.ಡಿ. ಸಂಧ್ಯಾರಾಣಿ, ಮೈಸೂರು ತಾ. ಈರಪ್ಪನಕೊಪ್ಪಲಿನ ಎಂ. ಅನಸುಯಾ, ಪಿರಿಯಾಪಟ್ಟಣದ ಬ್ಯಾಂಕ್‌ಬಡಾವಣೆಯ ಜಯಲಕ್ಷ್ಮಿ, ನಂಜನಗೂಡು ತಾ. ನಂದಿಗುಂದಪುರದ ಪುಷ್ಪಾ ಮತ್ತು ಟಿ. ನರಸೀಪುರ ತಾ. ಕಟ್ಟೆಪುರದ ಎಸ್.ಕೆ. ಜ್ಯೋತಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಹಾಗೆಯೇ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಚ್.ಡಿ. ಕೋಟೆ ತಾ. ಮಂಟಿ ಹಾಡಿಯ ಡಿ.ಎಸ್. ಧನಂಜಯ, ಸರಗೂರು ತಾ. ಮುಳ್ಳೂರಿನ ಎಚ್.ಬಿ. ಜ್ಯೋತಿ, ಹುಣಸೂರು ತಾ. ಕಾಮೇಗೌಡನಕೊಪ್ಪಲಿನ ಬಿ.ಟಿ. ಮಂಜುನಾಥ, ಕೆ.ಆರ್. ನಗರ ತಾ. ಸಾತಿಗ್ರಾಮದ ಎಂ. ಮಂಜುರಾಜ, ಸಾಲಿಗ್ರಾಮ ತಾ. ಮುದುಗುಪ್ಪೆಯ ಎಚ್.ಕೆ. ಪ್ರಕಾಶ್, ಮೈಸೂರು ಉತ್ತರ ವಲಯದ ಕುಂಬಾರಕೊಪ್ಪಲಿನ ವೈ.ಇ. ಲೋಹಿತೇಶ, ಮೈಸೂರು ದಕ್ಷಿಣದ ಲಕ್ಷ್ಮೀಪುರಂ ಗಾಡಿಚೌಕದ ಎಸ್. ರವಿಕುಮಾರ್, ಮೈಸೂರು ತಾ. ಕೀಳನಪುರದ ಸಿ.ಬಿ. ಮಂಜುಳಾ, ಪಿರಿಯಾಪಟ್ಟಣ ತಾ. ಈಚೂರಿನ ಎ.ಎಂ. ಮಹದೇವಿ, ನಂಜನಗೂಡು ತಾ. ಹೆಗ್ಡಹಳ್ಳಿಯ ಎಚ್. ಸುನಂದಾ ಹಾಗೂ ಟಿ. ನರಸೀಪುರ ತಾ. ಕಗ್ಗಲಿಪುರದ ಎಂ. ನಾಗೇಶ್ ಕುಮಾರ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರೌಢಶಾಲಾ ವಿಭಾಗ
ಪ್ರೌಢಶಾಲಾ ವಿಭಾಗದಲ್ಲಿ ಎಚ್.ಡಿ. ಕೋಟೆ ತಾ. ಅಂತರಸಂತೆಯ ಎಂ. ಕೋಮಲಾ, ಸರಗೂರಿನ ಯು. ಸಂಜಯ್, ಹುಣಸೂರು ತಾ. ಬನ್ನಿಕುಪ್ಪೆಯ ಎಚ್.ಪಿ. ಹರೀಶ್, ಕೆ.ಆರ್. ನಗರ ತಾ. ಡೋರ್ನಕಹಳ್ಳಿಯ ಭಕ್ತಿಪ್ರಸಾದ್, ಸಾಲಿಗ್ರಾಮ ತಾ. ತಂದ್ರೆಯ ಎಂ.ಕೆ. ಸತೀಶ್, ಮೈಸೂರು ಉತ್ತರ ವಲಯ ಕುಂಬಾರಕೊಪ್ಪಲಿನ ಎಂ. ಅರುಣ್ ಕುಮಾರ್, ದಕ್ಷಿಣ ವಲಯದ ಕನಕಗಿರಿಯ ಎಲ್.ಆರ್. ಶ್ವೇತಾ, ಮೈಸೂರು ತಾ. ಗುಂಗ್ರಾಲ್‌ಛತ್ರದ ಪಿ.ಜಿ. ಸಂಕಲ್ಪರಾಜ್, ಪಿರಿಯಾಪಟ್ಟಣ ತಾ. ದೊಡ್ಡಬೇಲಾಳು ಜೆ. ಲೋಕೇಶ, ನಂಜನಗೂಡು ತಾ. ನವಿಲೂರು ಕೆ.ಕೆ. ಶೋಭಾಕುಮಾರಿ ಹಾಗೂ ಟಿ. ನರಸೀಪುರ ತಾ. ಮೇದಿನಿಯ ಬಿ. ಮಹದೇವಪ್ರಸಾದ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.