ಸಾರಾಂಶ
ಡಾ.ಬಿ.ಆರ್.ಅಂಬೇಡ್ಕರ್ ಬಡವರ, ಶೋಷಿತರ ಪರ ಗಟ್ಟಿ ಧ್ವನಿಯಾಗಿದ್ದರು. ಅನ್ಯಾಯದ ವಿರುದ್ಧ ಸಿಡಿದೇಳುವ ವ್ಯಕ್ತಿತ್ವ ಅವರಲ್ಲಿತ್ತು ಎಂದು ದಲಿತ ಮುಖಂಡ ಶೆಟ್ಟಿಕೊಪ್ಪ ಮಹೇಶ್ ತಿಳಿಸಿದರು.
ಶೆಟ್ಟಿಕೊಪ್ಪ ಸಮೀಪದ ಜನತಾ ಕಾಲೋನಿಯ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡಾ.ಬಿ.ಆರ್.ಅಂಬೇಡ್ಕರ್ ಬಡವರ, ಶೋಷಿತರ ಪರ ಗಟ್ಟಿ ಧ್ವನಿಯಾಗಿದ್ದರು. ಅನ್ಯಾಯದ ವಿರುದ್ಧ ಸಿಡಿದೇಳುವ ವ್ಯಕ್ತಿತ್ವ ಅವರಲ್ಲಿತ್ತು ಎಂದು ದಲಿತ ಮುಖಂಡ ಶೆಟ್ಟಿಕೊಪ್ಪ ಮಹೇಶ್ ತಿಳಿಸಿದರು.
ಭಾನುವಾರ ಶೆಟ್ಟಿಕೊಪ್ಪ ಸಮೀಪದ ಜನತಾ ಕಾಲೋನಿಯಲ್ಲಿ ಪಿ.ಮಂಜುನಾಥ್ ಮನೆಯಂಗಳದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿಯಲ್ಲಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗ ಮಾತ್ರ ನಾಯಕರಲ್ಲ. ಎಲ್ಲಾ ಜನಾಂಗದವರಿಗೂ ನಾಯಕರಾಗಿದ್ದರು. ಅವರ ನಂತರ ಈ ಜಗತ್ತಿನಲ್ಲಿ ಮತ್ತೊಬ್ಬ ಅಂಬೇಡ್ಕರ್ ಅಂತಹ ನಾಯಕ ಹುಟ್ಟಿ ಬರಲಿಲ್ಲ. ಅವರು ವಿಶ್ವ ಚೇತನರಾಗಿದ್ದಾರೆ. ಸಂವಿಧಾನದಿಂದ ಸರ್ವ ಜನಾಂಗಕ್ಕೂ ಸಮಬಾಳು, ಸಮಪಾಲು ಸಿಕ್ಕಿದೆ. ಸಂವಿಧಾನವೇ ಎಲ್ಲಾ ಧರ್ಮಗಳನ್ನು ರಕ್ಷಿಸುತ್ತಿದೆ. ಸಂವಿಧಾನ ಎಂಬುದು ಹಿಂದೂಗಳಿಗೆ ಭಗವದ್ಗೀತೆ. ಮುಸ್ಲಿಂರಿಗೆ ಖುರಾನ್ ಹಾಗೂ ಕ್ರಿಶ್ಚಿಯನ್ ರಿಗೆ ಬೈಬಲ್ ಇದ್ದಂತೆ ಎಂದರು.ಶೆಟ್ಟಿಕೊಪ್ಪದ ಮುಖಂಡ ಎ.ಬಿ.ಮಂಜುನಾಥ್ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ. ಅಂತಹ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಅಂಬೇಡ್ಕರ್ ಒಬ್ಬ ಮಹಾನ್ ಮೇದಾವಿ, ಚಿಂತಕ, ದೂರದೃಷ್ಠಿಯುಳ್ಳ ವ್ಯಕ್ತಿಯಾಗಿದ್ದರು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಭೀಮನರಿ ಪ್ರಶಾಂತ್, ಅಬ್ದುಲ್ ರೆಹಮಾನ್, ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್ (ಸಾಗರ್ ಬಣ) ದೀಪು, ಚಂದ್ರಶೇಖರ್,ಪಲ್ಲವಿ ಮಂಜುನಾಥ್, ಮತ್ತಿತರರು ಉಪಸ್ಥಿತರಿದ್ದರು.