ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಕಾಲಿಟ್ಟ ಡಾ. ಬ್ರೋ : ಗೋಕರ್ಣ ಸೌಂದರ್ಯ ಆಸ್ವಾದಿಸಿ ವೀಡಿಯೋ

| Published : Oct 30 2024, 12:47 AM IST / Updated: Oct 30 2024, 01:03 PM IST

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಕಾಲಿಟ್ಟ ಡಾ. ಬ್ರೋ : ಗೋಕರ್ಣ ಸೌಂದರ್ಯ ಆಸ್ವಾದಿಸಿ ವೀಡಿಯೋ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕರ್ಣ ಸೌಂದರ್ಯ ಆಹ್ವಾದಿಸಿ ಆ ಬಗ್ಗೆ ವೀಡಿಯೋ ಮಾಡಿರುವ ಗಗನ್ ಶ್ರೀನಿವಾಸ್ ಇಲ್ಲಿನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಗೋಕರ್ಣ: ಜಗತ್ತಿನ ಮೂಲೆ ಮೂಲೆಯನ್ನು ತೋರಿಸುತ್ತೇನೆ ಎಂದು ಹೇಳಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ದೇಶ- ವಿದೇಶಗಳನ್ನು ಸುತ್ತುತ್ತಿರುವ ಗಗನ್ ಶ್ರೀನಿವಾಸ್ (ಡಾ. ಬ್ರೋ) ಇದೀಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರನ್ನು ಕರೆತರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೋಕರ್ಣ ಸೌಂದರ್ಯ ಆಹ್ವಾದಿಸಿ ಆ ಬಗ್ಗೆ ವೀಡಿಯೋ ಮಾಡಿರುವ ಗಗನ್ ಶ್ರೀನಿವಾಸ್ ಇಲ್ಲಿನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಡಾ. ಬ್ರೋ ಎಂದೇ ಖ್ಯಾತಿ ಪಡೆದಿರುವ ಗಗನ್ ಶ್ರೀನಿವಾಸ ಅವರು ಗೋ ಪ್ರವಾಸ ಎಂಬ ಕಂಪನಿ ಶುರು ಮಾಡಿದ್ದಾರೆ. ಆ ಕಂಪನಿಯ ಮೂಲಕ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಯೋಜನೆ ರೂಪಿಸಿದ್ದಾರೆ.

ಗೋಕರ್ಣ, ಹೊನ್ನಾವರ, ಮುರುಡೇಶ್ವರದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆತರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಾಕಿಕೊಂಡಿರುವ ಯೋಜನೆಯಲ್ಲಿ ಗೋಕರ್ಣ ಕಡಲತೀರ ಪ್ರವಾಸ ಮುಖ್ಯವಾಗಿದೆ. ಪ್ರತಿ ಶುಕ್ರವಾರ ತಂಡದ ಜತೆ ಮಾರ್ಗದರ್ಶಕರನ್ನು ಇಲ್ಲಿ ಕಳುಹಿಸಲಿದ್ದಾರೆ. ₹೩೪೯೯ಕ್ಕೆ ಊಟ- ವಸತಿ ಜತೆ ರೆಸಾರ್ಟಿನಲ್ಲಿ ತಂಗುವ ಅವಕಾಶವನ್ನು ಅವರು ಮಾಡಿಕೊಟ್ಟಿದ್ದಾರೆ.

ಶಾಸಕ ಎಸ್‌ಟಿಎಸ್‌ ಹೇಳಿಕೆಯಲ್ಲಿ ಸತ್ಯಾಂಶವಿದೆ: ಶಿವರಾಮ ಹೆಬ್ಬಾರ

ಮುಂಡಗೋಡ: ಇನ್ನೂ ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂದು ಶಾಸಕ ಎಸ್.ಟಿ. ಸೋಮಶೇಖರ ಹೇಳಿರುವುದರಲ್ಲಿ ಸತ್ಯಾಂಶವಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಸ್.ಟಿ. ಸೋಮಶೇಖರ ಅನುಭವಿ ರಾಜಕಾರಣಿ. ಅವರು ಯಾವತ್ತೂ ಸತ್ಯಕ್ಕೆ ಹತ್ತಿರವಾಗಿರುತ್ತಾರೆ. ಮಧು ಬಂಗಾರಪ್ಪ ಅವರು ನನ್ನ ಮೇಲೆ ಇಟ್ಟ ವಿಶ್ವಾಸ ಮತ್ತು ಅಭಿಮಾನದಿಂದ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಯಾವುದೇ ಮಾಧ್ಯಮದವರ ಒತ್ತಡಕ್ಕೆ ಮಣಿದು ತಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಾಲ ಕೂಡ ಪಕ್ವವಾಗಿಲ್ಲ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳುತ್ತೇನೆ ಎಂದರು.

ಉಪಚುನಾವಣೆ ಪ್ರಚಾರಕ್ಕಾಗಿ ಯಾವುದೇ ರಾಜಕೀಯ ಪಕ್ಷಗಳು ಆಹ್ವಾನ ನೀಡಿಲ್ಲ. ವೈಯಕ್ತಿಕವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಆತ್ಮೀಯ ಸ್ನೇಹಿತರು. ಪಕ್ಷ ಬೇರೆ, ಆತ್ಮೀಯತೆ ಬೇರೆ ಎಂದರು.

ಮುಡಾ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಆರೋಪ ಮಾತ್ರ. ನ್ಯಾಯಾಂಗ ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿದೆ. ಸತೀಶ ಸೈಲ್ ಅವರಿಗೆ ಒಂದು ನ್ಯಾಯಾಲಯದಲ್ಲಿ ಅಪಜಯವಾಗಿರಬಹುದು. ಹೈಕೋರ್ಟ್‌ನಲ್ಲಿ ಅವರಿಗೆ ಜಯ ಸಿಗಬಹುದು ಎಂದರು.