ಸಾರಾಂಶ
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮೇ.16ಕ್ಕೆ 40 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಸಮಸ್ತ ಸಿಬ್ಬಂದಿಯೊವರೊಂದಿಗೆ ಹೂಗೂಚ್ಛ ನೀಡಿ ಅಭಿನಂದಿಸಿದರು. 1984ರ ಮೇ.16 ರಂದು ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಡಾ.ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದು ಪವಾಡ ಸದೃಶ್ಯ.
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮೇ.16ಕ್ಕೆ 40 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಸಮಸ್ತ ಸಿಬ್ಬಂದಿಯೊವರೊಂದಿಗೆ ಹೂಗೂಚ್ಛ ನೀಡಿ ಅಭಿನಂದಿಸಿದರು. 1984ರ ಮೇ.16 ರಂದು ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಡಾ.ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದು ಪವಾಡ ಸದೃಶ್ಯ. ಕೇವಲ 38 ಅಂಗಸಂಸ್ಥೆಗಳ ಸಂಖ್ಯೆಯನ್ನು ಇಂದು 310ಕ್ಕೆ ಕೊಂಡ್ಯೊಯ್ದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಅವರ ಈ ಅವಿಸ್ಮರಣೀಯ ಸೇವೆಯ ಸಂಭ್ರಮಾಚರಣೆಯನ್ನು ಕೆಎಲ್‌ಇ ಆಡಳಿತ ಮಂಡಳಿ ಹಾಗೂ ಸಮಸ್ತ ಕೆಎಲ್‌ಇ ಪರಿವಾರ ಮೇ.18 ರಂದು ಸಂಜೆ 5.30ಕ್ಕೆ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.