ಸಾರಾಂಶ
ಶ್ರೀ ಶರಣಬಸವೇಶ್ವರ ಸಂಸ್ಥಾನವು ಧಾರ್ಮಿಕ, ಶೈಕ್ಷಣಿಕ ಹಾಗೂ ದಾಸೋಹ ಕ್ಷೇತ್ರಗಳಲ್ಲಿ ನೀಡಿದ ಅನನ್ಯ ಸೇವೆ ಪರಿಗಣಿಸಿ ಮಾತೋಶ್ರೀ ಯವರನ್ನು ಆಯ್ಕೆ ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ದಾಸೋಹ ಮೂರ್ತಿಗಳಾದ ಪರಮಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪ ಅವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ್ ಪಾಳಾ ಹಾಗೂ ಸುಮ್ಮೇಳನದ ಸಂಚಾಲಕರಾದ ಪ್ರೊ. ಯಶವಂತರಾಯ ಅಷ್ಠಗಿ ಜಂಟಿಯಾಗಿ ತಿಳಿಸಿದ್ದಾರೆ.ಕಲಬುರಗಿ ಹಿರಿಯ ಸಾಹಿತಿಗಳು, ಸಾಂಸ್ಕೃತಿಕ ಸಂಘಟಕರು ಹಾಗೂ ಸಾಹಿತ್ಯ ಪ್ರೇಮಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರ ಪರಂಪರೆ ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನವು ಧಾರ್ಮಿಕ, ಶೈಕ್ಷಣಿಕ ಹಾಗೂ ದಾಸೋಹ ಕ್ಷೇತ್ರಗಳಲ್ಲಿ ನೀಡಿದ ಅನನ್ಯ ಸೇವೆ ಪರಿಗಣಿಸಿ ಮಾತೋಶ್ರೀ ಯವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಇಂದು ನಡೆದ ಹಿರಿಯ ಸಾಹಿತಿಗಳ ಹಾಗೂ ಸಾಹಿತ್ಯ ಸಂಘಟಕರ ಸಭೆಯಲ್ಲಿ, ಸಾಹಿತಿಗಳಾದ ಡಾ.ವಿಜಯಕುಮಾರ್ ಪರುತೆ, ಬಿ ಎಚ್ ನಿರಗೂಡಿ, ಲಿಂಗರಾಜ ಸಿರಗಾಪುರ, ಡಾ. ಆನಂದ ಸಿದ್ಧ ಮಣಿ, ಪ. ಮೀನು ಸಗರ್, ಡಾ ಚಿ ಸಿ ನಿಂಗಣ್ಣ, ಡಾ.ಕೆ ಗಿರಿಮಲ್ಲ, ಡಾ.ನಾಗಪ್ಪ ಗೋಗಿ, ಡಾ ಶರಣಬಸಪ್ಪ ವಡ್ಡನಕೇರಿ, ಅಂಬಾರಾವ್ ಕೋಣೆ, ಬಸಂತ್ ರಾವ್ ಕೊಳಕೂರ, ಎಚ್ ಎಸ್ ಬರಗಾಲಿ, ಪ್ರಸಾದ್ ಪಟ್ಟಣಕರ್, ಸಿದ್ದನಗೌಡ ಪಾಟೀಲ್ ಕಡಣಿ, ಉಮೇಶ್ ಕಣ್ಣಿ, ಸೇರಿ ಅನೇಕರಿದ್ದರು.