ಡಾ.ದಿಲೀಪ್ ಎನ್ಕೆ ನಾಲ್ಕನೇ ಕಥಾ ಸಂಕಲನ ಬಿಡುಗಡೆಗೆ ಸಿದ್ಧ

| Published : Apr 19 2025, 12:30 AM IST

ಡಾ.ದಿಲೀಪ್ ಎನ್ಕೆ ನಾಲ್ಕನೇ ಕಥಾ ಸಂಕಲನ ಬಿಡುಗಡೆಗೆ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ದಿಲೀಪ್ ಎನ್ಕೆ ಅವರ 4ನೇ ಕಥಾ ಸಂಕಲನ ತಿತ್ತಿಬ್ವಾಸನ ಟೈಟಾನ್ ವಾಚು ಕೃತಿ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಾಹಿತಿ ಡಾ.ದಿಲೀಪ್ ಎನ್ಕೆ ಅವರ ತಿತ್ತಿಬ್ವಾಸನ ಟೈಟಾನ್ ವಾಚು ಕಥಾ ಸಂಕಲನ ಬಿಡುಗಡೆಗೆ ಸಿದ್ಧಗೊಂಡಿದೆ. ಈಗಾಗಲೇ ದಿಲೀಪ್ ಎನ್ಕೆ ಅವರು ''''''''ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾಸಂಕಲನ), ಹಾಗೂ ''''''''ಚೆಗ್ಗಿ -ಮಾರಿಕುಣಿತದ ಸೊಲ್ಲು'''''''' (ಕವನ ಸಂಕಲನ) ಹೊರತಂದಿದ್ದು ಪ್ರಸ್ತುತ ''''''''ತಿತ್ತಿಬ್ವಾಸನ ಟೈಟಾನ್ ವಾಚು '''''''' ಕೃತಿ ಬಿಡುಗಡೆ ಏ.30ರಂದು ಜರುಗಲಿದ್ದು ಕತೆಗಾರ ಅಬ್ದುಲ್ ರಶೀದ್ ಕೃತಿ ಬಿಡುಗಡೆಗೊಳಿಸುವರು. ಎನ್ಕೆ ಅವರು ಡಾ.ಸಿ.ಡಿ ಪರಶುರಾಮ ಮಾರ್ಗದರ್ಶನದಲ್ಲಿ ''''''''ಕನ್ನಡ ದಲಿತ ಕಥಾಸಾಹಿತ್ಯ: ಅಕ್ಷರಸ್ಥ ದಲಿತರ ತಲ್ಲಣಗಳು''''''''ಎಂಬ ವಿಷಯದಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದು ಇವರ ನಾಲ್ಕನೇ ಕೃತಿ ಸಹಾ ಬಿಡುಗಡೆಗೂ ಮುನ್ನವೇ ಹೆಚ್ಚು ಗಮನ ಸೆಳೆದಿದೆ.

ತಾಯಿ ಕೊಟ್ಟ ಪ್ರೀತಿಯ ಟೈಟಾನ್ ವಾಚಿನ ಕಥೆ:

ಈ ಕಥಾ ಸಂಕಲನವು 9 ಕಥೆಗಳನ್ನು ಒಳಗೊಂಡಿದ್ದು ತಿತ್ತಿಬ್ವಾಸನ ಟೈಟಾನ್ ವಾಚು ಎಂಬ ಶಿರ್ಷಿಕೆಯೆ ಮೊದಲ ಕಥೆಯಾಗಿದ್ದು ತಿತ್ತಿಬ್ವಾಸ ಎಂಬುದೊಂದು ಪಾತ್ರವಾಗಿದ್ದು ಈತನಿಗೆ ತಾಯಿ ಸಾಯುವ ವೇಳೆ ನೀಡಿದ್ದ ಟೈಟಾನ್ ವಾಚನ್ನು ಅತ್ಯಂತ ಪ್ರೀತಿಯಿಂದ ಜೋಪಾನವಾಗಿ ಕಾಪಾಡಿಕೊಂಡಿರುತ್ತಾನೆ, ಕಡು ಬಡವನಾದ ಈತ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ತನ್ನ ಗೆಳೆಯರಿಗೆ ವಿಧಿ ಇಲ್ಲದ ಮನನೊಂದು ತಾಯಿ ನೀಡಿದ ಟೈಟಾನ್ ವಾಚನ್ನು ಮಾರಿ ಊಟ ಕೊಡಿಸುವ ಕಥಾ ಹಂದರವೇ ಈ ಶೀರ್ಷಿಕೆ ಎನ್ನಲಾಗಿದೆ.

ಖ್ಯಾತ ಕಥೆಗಾರ್ತಿ ಮಂಜುನಾಥ್ ಲತಾ, ಪ್ರಾಧ್ಯಾಪಕ ಡಾ.ವಿಜಯಕುಮಾರಿ ಕರಿಕಲ್, ನೌಕರರ ಸಂಘದ ಅಧ್ಯಕ್ಷ ಎ.ಅಲೆಗ್ಸಾಂಡರ್, ಯುವ ಬರಹಗಾರ ದಾದಾಟೀರ್ ಜೈಮನ್, ಸಾಹಿತಿ ಶಂಕನಪುರ ಮಹಾದೇವ ಇನ್ನಿತರರು 30ರಂದು ಜರುಗುವ ಕೖತಿ ಬಿಡುಗಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ.