ಪ್ರಿಯಾಂಕಾ ಜತೆ ಡಾ.ದ್ವಾರಕನಾಥ ರಾಜಕೀಯ ಚರ್ಚೆ

| Published : Apr 30 2024, 02:00 AM IST

ಸಾರಾಂಶ

ಕವಟಗಿಮಠ ನಗರದಲ್ಲಿರುವ ಮನೆಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಕಾನೂನು ವಿಭಾಗದ ವಕ್ತಾರ ಡಾ.ಸಿ.ಎಸ್.ದ್ವಾರಕನಾಥ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕವಟಗಿಮಠ ನಗರದಲ್ಲಿರುವ ಮನೆಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಕಾನೂನು ವಿಭಾಗದ ವಕ್ತಾರ ಡಾ.ಸಿ.ಎಸ್.ದ್ವಾರಕನಾಥ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

ಇದೇ ವೇಳೆ ಡಾ.ಸಿ.ಎಸ್.ದ್ವಾರಕನಾಥ ಮಾತನಾಡಿ, ತಂದೆ, ಸಚಿವರಾದ‌ ಸತೀಶ್‌ ಜಾರಕಿಹೊಳಿ ಕಾರ್ಯಕ್ಷಮತೆ, ಅಭಿವೃದ್ಧಿ ಕೆಲಸ, ಸಮಾಜ ಸೇವೆ, ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಡಾಯ ಸಾಹಿತಿ ಯಲ್ಲಪ್ಪ ಇಮ್ಮಡಿ, ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ವಕೀಲರು, ಸಂಜಯ ಲೋಕಾಪುರೆ, ಉದಯ ವಾಗ್ಮುರೆ, ರೀಹಾನಾ ನದಾಪ್, ಮಹಾದೇವ ಪೋಳ, ಸಂಜಯ ಲೋಕಾಪುರೆ, ದಯಾನಂದ ಕಾಂಬಳೆ ಸೇರಿದಂತೆ ಹಲವರು ಇದ್ದರು.