ಸಾರಾಂಶ
- ಸಾಹಿತಿ ಡಾ. ಚದುರಂಗರ 109ನೇ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮಮೈಸೂರಿನ ಎಂಜಿನಿಯರಗಳ ಸಂಸ್ಥೆಯ ಸಭಾಂಗಣದಲ್ಲಿ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್
- ಸಾಹಿತಿ ಡಾ. ಚದುರಂಗರ 109ನೇ ಹುಟ್ಟುಹಬ್ಬ ಸಂಭ್ರಮ ನಿಂದ ನಡೆದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೈಸೂರುಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ವತಿಯಿಂದ ನಗರದ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿ ಡಾ. ಚದುರಂಗ (ಡಾ. ಸುಬ್ರಹ್ಮಣ್ಯ ರಾಜೇ ಅರಸ್) 109ನೇ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 5 ಜನ ಸಾಧಕರಿಗೆ ಡಾ. ಚದುರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಪೊಲೀಸ್ ಅಕಾಡೆಮಿಯ ಸಹಾಯಕ ಆಡಳಿತಾಧಿಕಾರಿ ಪಿ. ಸರಳಾ, ಚಿಟ್ಟೆಗಳ ಸಂಶೋಧಕ ಅರುಣ್ ಕುಮಾರ್ ರಾಜೇ ಅರಸ್, ಉಪನ್ಯಾಸಕಿ ಹಾಗೂ ಯುವ ಲೇಖಕಿ ಲಕ್ಷ್ಮೀ ಕಿಶೋರ್ ಅರಸ್, ಬೆಟ್ಟದತುಂಗಾ ಗ್ರಾಪಂ ಅಧ್ಯಕ್ಷೆ ಪ್ರೀತಿ ಅರಸ್ ಹಾಗೂ ಮಂಡ್ಯದ ಅರಸು ಮಂಡಳಿ ಸಂಘದ ಅಧ್ಯಕ್ಷ ಜೆ.ಎಂ. ಮಾದರಾಜೇ ಅರಸ್ ಅವರಿಗೆ ಡಾ. ಚದುರಂಗ ಪ್ರಶಸ್ತಿಯನ್ನು ಕೆಯುಎಂಸಿ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರ್ ರಾಜೇ ಅರಸ್ ಪ್ರದಾನ ಮಾಡಿದರು.ಈ ವೇಳೆ ಚದುರಂಗ ಅವರ ಸೊಸೆ ವಿಜಯಲಕ್ಷ್ಮೀ ಮಾತನಾಡಿ, ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ನಮ್ಮ ಮಾವನವರು ಮಾನವೀಯ ಮೂರ್ತಿ. ಅವರ ಜೀವನದಲ್ಲಿ ಮಾನವೀಯತೆ ಗುಣಗಳು ಎದ್ದು ಕಾಣುತ್ತಿದ್ದವು. ಮೃದು ಭಾಷಿಗರು. ಏರುಧ್ವನಿಯಲ್ಲಿ ಗಟ್ಟಿಯಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಹಿಳೆಯರನ್ನು ಗೌರವದಿಂದ ಕಾಣುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮೈಸೂರು ಅರಸು ಮಂಡಳಿ ಸಂಘದ ಅಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸ್ ಉದ್ಘಾಸಿದರು. ಸಾಹಿತಿ ಹಾಗೂ ವಿಮರ್ಶಕ ಡಾ.ಸಿ. ನಾಗಣ್ಣ ಮುಖ್ಯ ಭಾಷಣ ಮಾಡಿದರು. ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ಗೌರವಾಧ್ಯಕ್ಷೆ ಬಿ. ವಿಜಯ ಅರಸ್ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಸಂಚಾಲಕ ಡಾ.ಎಂಜಿ.ಆರ್. ಅರಸ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಇದ್ದರು.