ಸಾರಾಂಶ
ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಡಾ ಜಿ.ಎ. ಪತ್ತಾರ ನಾಡಿನ ಹೆಸರಾಂತ ಚಿತ್ರ ಕಲಾವಿದರು, ಲೋಹಶಿಲ್ಪ ಕಲಾವಿದರು, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಅತ್ಯಂತ ಕ್ರಿಯಾಶೀಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಸಹ ಸಾವಿರಾರು ಚಿತ್ರ ಕಲಾಕೃತಿ ರಚಿಸಿದ್ದಾರೆ ಎಂದು ಮಾಜಿ ಸಂಸದ ಅಮರಸಿಂಹ ವಸಂತರಾವ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಡಾ ಜಿ.ಎ. ಪತ್ತಾರ ನಾಡಿನ ಹೆಸರಾಂತ ಚಿತ್ರ ಕಲಾವಿದರು, ಲೋಹಶಿಲ್ಪ ಕಲಾವಿದರು, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಅತ್ಯಂತ ಕ್ರಿಯಾಶೀಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಸಹ ಸಾವಿರಾರು ಚಿತ್ರ ಕಲಾಕೃತಿ ರಚಿಸಿದ್ದಾರೆ ಎಂದು ಮಾಜಿ ಸಂಸದ ಅಮರಸಿಂಹ ವಸಂತರಾವ ಪಾಟೀಲ ಹೇಳಿದರು.ಸ್ಥಳೀಯ ನಿವೃತ್ತ ಚಿತ್ರಕಲಾ ಶಿಕ್ಷಕ ಜಿ.ಎ.ಪತ್ತಾರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವಿಶ್ವಕರ್ಮರು ಹುಟ್ಟು ಕಲಾವಿದರು. ಕಲೆಯೇ ಅವರ ಜೀವಾಳ. ಕಲಾವಿದ ಡಾ ಜಿ.ಎ. ಪತ್ತಾರ ಅವರ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದು ಪ್ರಶಂಸಿಸದರು. ಕಾರ್ಯಕ್ರಮದಲ್ಲಿ ಪಾಸಗೊಂಡ ಪಾಟೀಲ ನಸಲಾಪುರ, ಮಹಾವೀರ ಪಾಟೀಲ, ಸುರೇಂದ್ರ ಪಾಟೀಲ, ಗೋಪಾಲ ಪತ್ತಾರ, ಡಾ ರಾಘವೇಂದ್ರ ಪತ್ತಾರ, ಪ್ರಕಾಶ ಪತ್ತಾರ, ಭಾಗ್ಯಶ್ರೀ, ಕರುಣಾ, ಶ್ರೀನಿವಾಸ, ಡಾ ವಿನಾಯಕ ಹಜ್ಜೆ, ಡಾ. ವಿಜಯ್ ಬಡಕುಂದ್ರಿ, ವೀರಶ್ರೀ ಸಮಾಜೆ, ಸರೋಜಿನಿ ಸಮಾಜೇ, ರತ್ನಾಪತ್ತಾರ, ಕಿರಣ್, ಸಾಯಿ, ಕವಿತಾ, ಮಾರುತಿ ಪತ್ತಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.