ಡಾ.ಗುರುಪಾದಪ್ಪ ಘೀವಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

| Published : Sep 24 2024, 02:02 AM IST

ಡಾ.ಗುರುಪಾದಪ್ಪ ಘೀವಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ತಾಳಿಕೋಟೆ ಮಹಾ ನಗರಿಯಲ್ಲಿ ಅ.೧ ರಂದು ಜರುಗುತ್ತಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಎಸ್.ಕೆ.ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಳಿಕೋಟೆ ಮಹಾ ನಗರಿಯಲ್ಲಿ ಅ.೧ ರಂದು ಜರುಗುತ್ತಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಎಸ್.ಕೆ.ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪಟ್ಟಣದ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಸೋಮವಾರ ತೆರೆಯಲಾದ ಕಚೇರಿಯಲ್ಲಿ ನಡೆದ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ೮ ಕ್ಕೂ ಹೆಚ್ಚು ಜನರ ಹೆಸರುಗಳು ಪ್ರಸ್ತಾಪವಾದವು. ಈ ೮ ಜನರ ಹೆಸರುಗಳಲ್ಲಿ ಡಾ.ಜಿ.ಎಂ.ಘೀವಾರಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಮತ್ತು ಘೀವಾರಿ ಅವರು ಬರೆದ ೨೦ ಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಒಳಗೊಂಡ ಅನೇಕ ಪುಸ್ತಕಗಳನ್ನು ಪಠ್ಯದಲ್ಲಿ ಅಳವಡಿಸಲು ವಿಶ್ವ ವಿದ್ಯಾಲಯವು ಆಯ್ಕೆ ಮಾಡಿರುವದನ್ನು ಪರಿಗಣಿಸಿ ಅವರನ್ನೇ ಆಯ್ಕೆ ಮಾಡಲಾಯಿತು.ಕಸಾಪ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ, ಕಸಾಪ ತಾಲೂಕು ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ, ಕೆ.ಎಚ್.ಪಾಟೀಲ(ಮೂಕಿಹಾಳ), ಡಾ.ನಜೀರ ಕೋಳ್ಯಾಳ, ಜಗದೀಶ ಬಿಳೇಭಾವಿ, ಅಣ್ಣು ವಾಲಿ, ಬಿ.ಆರ್.ಪೊಲೀಸ್‌ಪಾಟೀಲ, ಆರೀಪ ಹೊನ್ನುಟಗಿ, ಸಚೀನ ಪಾಟೀಲ, ಮದರಿ, ಸಿದ್ದು ಶಿರಶಿ, ಜಿ.ಟಿ.ಘೋರ್ಪಡೆ, ಡಾ.ಎ.ಎ.ನಾಲಬಂದ, ಶಿವಶಂಕರ ಹಿರೇಮಠ, ಸಂಗನಗೌಡ ಅಸ್ಕಿ, ಪ್ರಕಾಶ ಪಾಟೀಲ, ಪಿ.ಬಿ.ಗುಬ್ಬೇವಾಡ, ಜೈಭೀಮ ಮುತ್ತಗಿ, ಪರಶುರಾಮ ತಂಗಡಗಿ, ಪ್ರಭುಗೌಡ ಭಂಟನೂರ, ಬಿ.ಬಿ.ಬಿರಾದಾರ, ಶ್ವೇತಾ ಯರಗಲ್ಲ ಮೊದಲಾದವರು ಉಪಸ್ಥಿತರಿದ್ದರು._______