ಡಾ. ಪಂಚಾಕ್ಷರಿ ಸಾಹಿತ್ಯದ ಮೂಲ ತಿರುಳೇ ಆದರ್ಶ ಪ್ರೇಮ

| Published : Jan 10 2025, 12:45 AM IST

ಡಾ. ಪಂಚಾಕ್ಷರಿ ಸಾಹಿತ್ಯದ ಮೂಲ ತಿರುಳೇ ಆದರ್ಶ ಪ್ರೇಮ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರ ಆಳ್ವಿಕೆಗೆ ಒಳಪಟ್ಟ ಕೊಪ್ಪಳದಲ್ಲಿ ನಿಜಾಮನ ದಬ್ಬಾಳಿಕೆ ಇತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳತ್ವದಲ್ಲಿ ಹೈದ್ರಾಬಾದ್‌ ವಿಮೋಚನಾ ಚಳವಳಿ ಉಗ್ರ ಸ್ವರೂಪ ಪಡೆದಿತ್ತು. ಬಾಲಕರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ ದಬ್ಬಾಳಿಕೆ ವಿರೋಧಿಸಿ ಕೊಪ್ಪಳ ಕೋಟೆಯ ಮೇಲೆ ಧ್ವಜ ಹಾರಿಸಿ ರಾಷ್ಟ್ರಪ್ರೇಮ ತೋರಿದರು.

ಧಾರವಾಡ:

ಡಾ. ಪಂಚಾಕ್ಷರಿ ಹಿರೇಮಠರ ಸಾಹಿತ್ಯದ ಮೂಲ ತಿರುಳೇ ಆದರ್ಶ ಪ್ರೇಮ ಹಾಗೂ ಮಾನವೀಯತೆ. ಅವರೊಬ್ಬ ಶ್ರೇಷ್ಠ ಅನುವಾದಕರು. ಅನುವಾದ ಕಾರ್ಯವನ್ನು ಎಂದೂ ಹಣ ಸಂಪಾದನೆಗಾಗಿ ಮಾಡಲಿಲ್ಲ ಎಂದು ಬಿಸಲಹಳ್ಳಿಯ ಪವನಕುಮಾರ ಪ್ರಭುದೇವ ಕಮ್ಮಾರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಪಂಚಾಕ್ಷರಿ ಹಿರೇಮಠ ದತ್ತಿ ಅಂಗವಾಗಿ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ ವಿಷಯ ಕುರಿತು ಮಾತನಾಡಿ, ಅವರೊಬ್ಬ ಬರಹಗಾರ, ಕಾದಂಬರಿಕಾರ, ವಿಮರ್ಶಕ, ನಾಟಕಕಾರ, ಪ್ರಬಂಧಕರಾಗಿ ಅಪ್ಪಟ ಸ್ವಾತಂತ್ರ್ಯ ಪ್ರಿಯರೂ ಆಗಿದ್ದರು ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರ ಆಳ್ವಿಕೆಗೆ ಒಳಪಟ್ಟ ಕೊಪ್ಪಳದಲ್ಲಿ ನಿಜಾಮನ ದಬ್ಬಾಳಿಕೆ ಇತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳತ್ವದಲ್ಲಿ ಹೈದ್ರಾಬಾದ್‌ ವಿಮೋಚನಾ ಚಳವಳಿ ಉಗ್ರ ಸ್ವರೂಪ ಪಡೆದಿತ್ತು. ಬಾಲಕರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ ದಬ್ಬಾಳಿಕೆ ವಿರೋಧಿಸಿ ಕೊಪ್ಪಳ ಕೋಟೆಯ ಮೇಲೆ ಧ್ವಜ ಹಾರಿಸಿ ರಾಷ್ಟ್ರಪ್ರೇಮ ತೋರಿದರು. ಇವರು ವಿಮೋಚನಾ ಹೋರಾಟಕ್ಕೆ ಶಿವಮೂರ್ತಿ ಸ್ವಾಮಿ ಅಳವಂಡಿ, ಬಸರಿಗಿಡದ ವೀರಪ್ಪನವರು ಉದಾರ ಸಹಾಯ ನೀಡಿ ಸಾರ್ಥರೆನಿಸಿದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಾನವೀಯತೆ ಕರುಣೆಯ ಸಾಕಾರಮೂರ್ತಿಗಳು ಡಾ. ಪಂಚಾಕ್ಷರಿ. ಅವರ ಸಾಕ್ಷಚಿತ್ರವು ಅದ್ಭುತವಾಗಿ ರಚನೆಯಾಗಿದೆ. ಅವರ ಸ್ವಾತಂತ್ರ್ಯ ಪ್ರೇಮವು ದಿ. ಬಸವರಾಜ ಕಟ್ಟಿಮನಿ ಅವರ ಮಾಡಿ ಮಡಿದವರು ಎಂಬ ಕಾದಂಬರಿ ನೆನಪಿಸುತ್ತಿದೆ ಎಂದರು.

ದತ್ತಿದಾನಿ ಜಯದೇವ ಹಿರೇಮಠ, ವೀರಣ್ಣ ಒಡ್ಡೀನ, ಶಂಕರ ಹಲಗತ್ತಿ, ಶಂಕರ ಕುಂಬಿ ಇದ್ದರು.