ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಶ್ರೀ ಸುತ್ತೂರು ಕ್ಷೇತ್ರದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸಂಸ್ಮರಣೆಯ ಅಂಗವಾಗಿ ಇತ್ತೀಚಿಗೆ ನಡೆದ ಮೂರು ದಿನಗಳ ಜೆಎಸ್ಎಸ್ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಬಹುಮಾನ ಗಳಿಸುವ ಮೂಲಕ ಸುತ್ತೂರು ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆಯು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.ಬಾಲಕರ ವಿಭಾಗದಲ್ಲಿ ಮ್ಯೊರಾಂಗ್ ತಾಮ್ ಬಿಟಾರಾಜ್ 100 ಮೀ ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ಪ್ರಥಮ, ಬಿಪ್ಲಬ್ ಕುಮಾರ್ ಮೊಹತೊ ತೃತೀಯ, ಮಹಂತೇಶ್ ನಾಯಕ್- 400 ಮೀ.- ಪ್ರಥಮ, ಜಿ.ಎಂ. ಕಾರ್ತಿಕ್-ತೃತೀಯ, ಗುರುಪ್ರಸಾದ್, 600 ಮೀ. ಓಟದಲ್ಲಿ- ಪ್ರಥಮ, ಮೊಹೀತ್ಕುಮಾರ್ ಮೆಹತೊ- ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಮೋಹಿತ್ಕುಮಾರ್ ಮೆಹತೊ -ದ್ವಿತೀಯ, ಮ್ಯೊರಾಂಗ್ ತಾಮ್ ಬಿಟಾರಾಜ್ - ತೃತೀಯ. ಉದ್ದಜಿಗಿತದಲ್ಲಿ- ಧನಂಜಿತ್ - ದ್ವಿತೀಯ, ಎತ್ತರ ಜಿಗಿತದಲ್ಲಿ- ಮೊಹಿತ್ ಕುಮಾರ್ ಮೆಹತೊ- ಪ್ರಥಮ, ಪೋತಿರಾಜ್ ಪನ್ ಮೈ -ತೃತೀಯ ಸ್ಥಾನವನ್ನು ಗಳಿಸಿದ್ದಾರೆ. 4x100ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಮೋಹಿತ್ ಕುಮಾರ್ ಮೆಹತೊ 13 ಅಂಕಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಪಾರಿತೋಷಕ ಮತ್ತು ನಗದು ಬಹುಮಾನ ಪಡೆದಿರುತ್ತಾನೆ.
ಗುಂಪು ಆಟಗಳಲ್ಲಿ ಕಬಡ್ಡಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.ಬಾಲಕರ ವಿಭಾಗದಲ್ಲಿ ಒಟ್ಟು 47 ಅಂಕ ಪಡೆದು ತಂಡ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಸಫಿಕಾವರ್ -100 ಮೀ.ಓ ಟದಲ್ಲಿ- ದ್ವಿತೀಯ, ಇಬಾನ್ ಯಾಕ್ ಮಾನ್ -ತೃತೀಯ, ಸಫಿಕಾವರ್ 200ಮೀ ಓಟದಲ್ಲಿ ದ್ವಿತೀಯ, 400 ಮೀ. ಓಟದಲ್ಲಿ - ತೃತೀಯ ಸ್ಥಾನ ಗಳಿಸಿದ್ದಾಳೆ. 600 ಮೀ.ಓಟದಲ್ಲಿ ಸರ್ಜನ್ ಸುಕ್ ಜಾಕ್-ತೃತೀಯ ಸ್ಥಾನ ಗಳಿಸಿದ್ದಾಳೆ. ಚಕ್ರ ಎಸೆತದಲ್ಲಿ ಹಬಾನಾಲುಂಗ್ಡೋ -ಪ್ರಥಮ, ಲೈಸಾರಾಮ್ ಜಿನಾ ಲಕ್ಷ್ಮಿ- ದ್ವಿತೀಯ ಸ್ಥಾನ ಗಳಿಸಿದ್ದಾರೆ.ಗುಂಡು ಎಸೆತದಲ್ಲಿ -ಸೋಹಾಕನಾನ್ಗುಡು- ಪ್ರಥಮ, ಹಬಾನಾಲುಂಗ್ಡೋ -ದ್ವಿತೀಯ, ಉದ್ದ ಜಿಗಿತದಲ್ಲಿ- ಲೈಸಾರಾಮ್ ಜಿನಾ ಲಕ್ಷ್ಮಿ- ಪ್ರಥಮ ಸ್ಥಾನ ಗಳಿಸಿದ್ದಾರೆ. ಎತ್ತರಜಿಗಿತದಲ್ಲಿ ಲೈಸಾರಾಮ್ ಜಿನಾ ಲಕ್ಷ್ಮಿ- ಪ್ರಥಮ, ಲೂಂಗ್ತೋ ಮೈನ್ -ತೃತೀಯ ಸ್ಥಾನ ಗಳಿಸಿದ್ದಾರೆ.
4x100 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಲೈಸಾರಾಮ್ಜಿನಾಲಕ್ಷ್ಮಿ13 ಅಂಕಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಪಾರಿತೋಷಕ ಮತ್ತು ನಗದು ಬಹುಮಾನ ಪಡೆದಿರುತ್ತಾಳೆ.ಗುಂಪು ಆಟಗಳಲ್ಲಿ ಕಬಡ್ಡಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಹಬಾನಾಲುಂಗ್ಡೋ - ಉತ್ತಮ ಆಟಗಾರ್ತಿ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಒಟ್ಟು 42 ಅಂಕ ಪಡೆದಿದ್ದಾರೆ. ಪಥಚಲನೆಯಲ್ಲಿ - ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಶಸ್ತಿ ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.