ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರನ್ನು 2026ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನವು ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೆ. ಚಿನ್ನಪ್ಪ ಗೌಡರು ಮಂಗಳೂರು ವಿವಿಯಿಂದ ‘ಭೂತಾರಾಧನೆ ಜಾನಪದೀಯ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಮಂಗಳೂರು ವಿವಿಯ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ, ಕುಲಸಚಿವ, ಡೀನ್, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ, ಹಾವೇರಿಯ ಕರ್ನಾಟಕ ಜಾನಪದ ವಿವಿಯ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಫಿನ್ಲೆಂಡಿನ ಪೋಸ್ಟ್ ಡಾಕ್ಟ್ರಲ್ ಫೆಲೋಶಿಪ್, ಜಪಾನ್ ಫೌಂಡೇಶನ್ ಫೆಲೊಶಿಪ್ ಪಡೆದಿದ್ದಾರೆ. ತುರ್ಕಿ ವಿವಿ, ಫಿನ್ಲೆಂಡ್ ತ್ಯುಂಬಿಗನ್ ವಿವಿ, ಜರ್ಮನಿಯ ವೂರ್ಝ್‌ಬರ್ಗ್‌ನ ಮ್ಯಾಕ್ಸ್‌ಮಿಲ್ಲನ್ಸ್ ವಿವಿಗೆ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭೂತಾರಾಧನೆ - ಮಾಯದ ನಡೆ ಜೋಗದ ನುಡಿ, ಕಿತ್ತಳೆ ಹಣ್ಣಲ್ಲ (ಕನ್ನಡ ಕವನ ಸಂಕಲನ), ಕೆಲೆಪು ಪೆರಡೆ ಕೆಲೆಪು (ತುಳು ಕವನ ಸಂಕಲನ), ಬೇಲಿಯೊಳಗಿನ ಬೆಳೆ (ಪ್ರಬಂಧ ಸಂಕಲನ), ಸತಿಕಮಲೆ, ಮಿತ್ಯನಾರಾಯಣ ಕತೆ, ಮಿತ್ತಬೈಲ್ ಯಮುನಕ್ಕೆ (ಕಾದಂಬರಿಗಳು), ಅನೇಕ ತುಳು ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಸಿರಿ ಸಂಧಿ : ಕನ್ನಡ ಪ್ರಸ್ತಾವನೆ ತುಳು ಪಠ್ಯ ಇವರ ಮುಖ್ಯ ಕೃತಿಯಾಗಿದೆ.