ಸಾರಾಂಶ
ಮೈಸೂರು: ಚೆನ್ನೈನ ದಕ್ಷಿಣ ಮೂರ್ತಿ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಭರತನಾಟ್ಯ ಗುರು, ಕರ್ನಾಟಕ ಕಲಾಶ್ರೀ ಡಾ.ಕೆ. ಕುಮಾರ್ ಅವರಿಗೆ ಲಂಡನ್ನ ಗ್ರಿಫಿನ್ ಕಾಲೇಜು ವತಿಯಿಂದ ಅತ್ಯುನ್ನತ ಅಂತಾರಾಷ್ಟ್ರೀಯ ಆಚಾರ್ಯ ಕಲಾ ಸಾಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ನಲ್ಲಿ ಕುಪ್ಪುಸ್ವಾಮಿ ಚೆಟ್ಟಿ, ಸಿರಪ್ಪು ಕಲೈ ಮಾಮಣಿ ಡಾ. ಅಂಬಿಕಾ ಕಾಮೇಶ್ವರ್, ಕಲೈ ಮಾಮಣಿ ವಿ. ರಾಮ್, ಗ್ರಿಫಿನ್ ಕಾಲೇಜ್ ಲಂಡನ್ ಇದರ ಸಂಸ್ಥಾಪಕರು ಹಾಗೂ ಅಧ್ಯಕ್ಷ ಡಾ. ಪದ್ಮ ರಾಹುಲನ್, ನಾಥನ್ ರಾಹುಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕೆ. ಕುಮಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇದು ವೈಯಕ್ತಿಕ ಸಾಧನೆಗೆ ಸಿಗುವ ಗೌರವವಷ್ಟೇ ಅಲ್ಲ, ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ವಾದ್ಯಕಲೆಗಳ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಅಳೆಯುವಂತಹ ಪ್ರಶಸ್ತಿ ಎಂದು ತಿಳಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಷ್ಟಕಲೆಗಳ ರಕ್ಷಣೆಯತ್ತ ಹಾಗೂ ಉತ್ತೇಜನದತ್ತ ಗ್ರಿಫಿನ್ ಕಾಲೇಜು ತೆಗೆದುಕೊಂಡಿರುವ ಅಪಾರ ಬದ್ಧತೆಗೆ ಅವರು ಹೃತ್ಪೂರ್ವಕವಾಗಿ ಧನ್ಯವಾದ ಸಲ್ಲಿಸಿದರು.