ಸಾರಾಂಶ
ಗುಂಡ್ಲುಪೇಟೆಯಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯೋಗೇಶ್ ಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗುಂಡ್ಲುಪೇಟೆ: ತಾಲೂಕಿನ ದಲಿತ ಸಾಹಿತ್ಯ ಪರಿಷತ್ತು ಘಟಕವು ಪ್ರಥಮ ತಾಲೂಕು ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಲಕ್ಷ್ಮೀ ಪ್ರೇಮಕುಮಾರ್ ಆಯ್ಕೆಯಾಗಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯೋಗೇಶ್ ಕೆ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಸೂಚನೆ ಮೇರೆಗೆ ತಾಲೂಕಿನಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು. ಜೂನ್ ಅಥವಾ ಜುಲೈನಲ್ಲಿ ಗುಂಡ್ಲುಪೇಟೆಯಲ್ಲಿ ಪ್ರಥಮ ಬಾರಿಗೆ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ತಾಲೂಕು ದಲಿತ ಸಾಹಿತ್ಯ ಪರಿಷತ್ತು ಘಟಕದ ಸಭೆಯಲ್ಲಿ ಒಪ್ಪಿಗೆ ಪಡೆದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಲಕ್ಷ್ಮೀ ಪ್ರೇಮಕುಮಾರ್ ಆಯ್ಕೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಗೋವಿಂದ ನಾಯಕ, ಪ್ರಧಾನ ಕಾರ್ಯದರ್ಶಿ ಬೇರಂಬಾಡಿ ರಾಜು ಇದ್ದರು.ಸಮ್ಮೇಳನ ಸರ್ವಾಧ್ಯಕ್ಷರ ಕಿರು ಪರಿಚಯ
ಡಾ.ಲಕ್ಷ್ಮೀ ಪ್ರೇಮಕುಮಾರ್ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದವರು. ಟಿಸಿಎಚ್ ಮುಗಿದ ಬಳಿಕ ಶಿಕ್ಷಕರಾಗಿ ೨೦ ವರ್ಷಗಳ ಸೇವೆ. ಅಂಚೆ ತೆರಪಿನ ಶಿಕ್ಷಣದಲ್ಲಿ ಬಿಎ, ಎಂಎ ಬಳಿಕ ಬಿಎಡ್ ಮುಗಿಸಿದ ಬಳಿಕ ಪ್ರೌಢ ಶಾಲಾ ಶಿಕ್ಷಕಿಯಾದರು. ಬಡ್ತಿ ಹೊಂದಿ ಕಾಲೇಜು ಉಪನ್ಯಾಸಕಿಯಾದ ಬಳಿಕ ನಿವೃತ್ತಿಯಾದರು. ಸೇವೆ ಸಲ್ಲಿಸುತ್ತಿರುವಾಗಲೇ ಕಲೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಜೊತೆಗೆ ನೃತ್ಯ ಹಾಗೂ ನಾಟಕ ನಿರ್ದೇಶನ. ಹಲವು ಕವನ ಸಂಕಲನ ಬರೆದರು. ಮನ ಮಂಥನ ಕೃತಿಗೆ ೨೦೧೪ರಲ್ಲಿ ಗೌರವ ಡಾಕ್ಟರೇಟ್ ಪಡೆದರು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.