ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್‌ರ 75ನೇ ಹುಟ್ಟುಹಬ್ಬವನ್ನು ಶನಿವಾರ ಅಚರಿಸಲಾಯಿತು.ಸಹಕಾರ ರಂಗದಲ್ಲಿ ಆದರ್ಶ ನಾಯಕರಾಗಿ ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವ ಚಿಂತನೆಯೊಂದಿಗೆ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿಗಳೆಲ್ಲರಿಗೂ ಪ್ರೀತಿ ಪಾತ್ರರು ಎಂದು ಸಹಕಾರಿ ಬಂಧುಗಳು ಶುಭ ಹಾರೈಸಿದ್ದಾರೆ.
ಡಾ. ರಾಜೇಂದ್ರ ಕುಮಾರ್ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ನವೋದಯ ಸ್ವಸಹಾಯ ಸಂಘಗಳ ಮೂಲಕ ಬಡವರ್ಗದ ಜನರ ಪಾಲಿಗೆ ಆರ್ಥಿಕ ಶಕ್ತಿಯಾಗಿ ಮಹಿಳಾ ಸಬಲೀಕರಣಕ್ಕೆ ಚೈತನ್ಯವನ್ನು ತುಂಬಿದ್ದು, ಅವರ ಬದುಕಿನ ಅಮೃತ ಮಹೋತ್ಸವಕ್ಕೆ ಗಣ್ಯರು, ಸಹಕಾರಿಗಳು ಬಂದು ಶುಭಕೋರಿದರು.ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಸಹಕಾರಿ ಬಂಧುಗಳಾದ ವಿನಯ ಕುಮಾರ್ ಸೂರಿಂಜೆ, ಭಾಸ್ಕರ್ ಎಸ್. ಕೋಟ್ಯಾನ್ , ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ.ವಾದಿರಾಜ ಶೆಟ್ಟಿ, ಟಿ. ಜಿ. ರಾಜಾರಾಮ ಭಟ್, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್. ರಾಜು ಪೂಜಾರಿ, ಜೈರಾಜ್ ಬಿ.ರೈ, ಎಂ.ಮಹೇಶ್ ಹೆಗ್ಡೆ , ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಹರಿಶ್ಚಂದ್ರ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಬಿ. ಜಯರಾಮ್ ರೈ , ಕೆ. ಗೋಪಾಲಕೃಷ್ಣ ಭಟ್, ಡಾ.ಸಿ.ಕೆ. ಬಳ್ಳಾಲ್, ಪುಷ್ಪರಾಜ್ ಜೈನ್, ಜಯಪ್ರಕಾಶ್ ತುಂಬೆ, ಸುನಿಲ್ ಕುಮಾರ್ ಬಜಗೋಳಿ, ಎಂ.ಎನ್. ರಾಜೇಂದ್ರ ಕುಮಾರ್ ಅವರ ಧರ್ಮಪತ್ನಿ ಅರುಣ ರಾಜೇಂದ್ರ ಕುಮಾರ್, ಮಕ್ಕಳಾದ ಮೇಘರಾಜ್ ಜೈನ್, ಹೇಮಲತಾ, ಸುಮಲತಾ ಮತ್ತಿತರರಿದ್ದರು.