ಡಾ. ಮನಮೋಹನ ಸಿಂಗ್‌ ಆಧುನಿಕತೆಯ ಹರಿಕಾರ

| Published : Dec 28 2024, 12:45 AM IST

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಪರೂಪದ ರಾಜಕಾರಣಿ, ದೂರದೃಷ್ಟಿವುಳ್ಳ ಪ್ರಧಾನಿಯಾಗಿದ್ದರು

ಲಕ್ಷ್ಮೇಶ್ವರ: ದೇಶದಲ್ಲಿ ಅಷ್ಟೆ ಅಲ್ಲದೇ ಜಗತ್ತಿನಲ್ಲಿಯೇ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ ಎಂದು ಹೆಸರು ಮಾಡಿದ್ದ ಹಾಗೂ ಭಾರತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಹೊಸ ಹೊಸ ವಿಚಾರ ಅಳವಡಿಸಿ ಅನೇಕ ಯೋಜನೆ ಜಾರಿಗೆ ತಂದಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದಿಂದ ಭಾರತ ಆಧುನಿಕತೆಯ ಹರಿಕಾರನೊರ್ವನನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ಅವರು ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ, ಭಾರತರತ್ನ ಡಾ. ಮನಮೋಹನ್‌ಸಿಂಗ್ ಅವರಿಗೆ ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ನಂತರ ನಡೆದ ಸಂತಾಪಸೂಚಕ ಸಭೆಯಲ್ಲಿ ಮಾತನಾಡಿದರು.

ಸಿಂಗ್ ಅವರ ಆರ್ಥಿಕ ಚಿಂತನೆಗಳ ಇಂದು ಭಾರತವನ್ನು ಸಾಕಷ್ಟು ಪ್ರಗತಿಯಲ್ಲಿ ತರುವಂತೆ ಮಾಡಿದ್ದವು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಪರೂಪದ ರಾಜಕಾರಣಿ, ದೂರದೃಷ್ಟಿವುಳ್ಳ ಪ್ರಧಾನಿಯಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದವರು. ಆರ್‌ಬಿಐ ಗವರ್ನರ್ ಆಗಿ, ವಿಶ್ವಬ್ಯಾಂಕಿನ ಭಾರತದ ಪ್ರತಿನಿಧಿಯಾಗಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಶ್ರಮಿಸಿದ್ದರು. ಅಂತಹ ಮೃದು ಸ್ವಭಾವದ ಚಿಂತನಾಶೀಲ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಬಸವರಾಜ ಹೊಳಲಾಪೂರ, ಬಸವರಾಜ ಓದುನವರ, ವೆಂಕಟೇಶ ಮಾತಾಡೆ, ಶೇಖಣ್ಣ ಲಮಾಣಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ಶಶಿಕಲಾ ಬಡಿಗೇರ, ಫಕ್ಕಿರೇಶ ನಂದೆಣ್ಣವರ, ಶಿವಾನಂದ ಲಿಂಗಶೆಟ್ಟಿ, ಮಹೇಶ ಸೂರಣಗಿ, ಮಂಜುನಾಥ ಬಟ್ಟೂರ, ಅಬ್ಜಲ್ ರಿತ್ತಿ, ಮುದಕಣ್ಣ ಗದ್ದಿ, ಮುತ್ತಣ್ಣ ಟೋಕಾಳಿ ಮುಂತಾದವರಿದ್ದರು.