ದೇಶದ ಆರ್ಥಿಕ ಅಭಿವೃದ್ಧಿಗೆ ಡಾ.ಮನಮೋಹನ್ ಸಿಂಗ್ ಕೊಡುಗೆ ಅಪಾರ

| Published : Dec 28 2024, 12:45 AM IST

ದೇಶದ ಆರ್ಥಿಕ ಅಭಿವೃದ್ಧಿಗೆ ಡಾ.ಮನಮೋಹನ್ ಸಿಂಗ್ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಆರ್ಥಿಕ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ.

ಸಂಡೂರು: ದೇಶದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ದೇಶ ಕಂಡಂತಹ ಧೀಮಂತ ನಾಯಕರು ಹಾಗೂ ಅಪ್ರತಿಮ ಆರ್ಥಿಕ ತಜ್ಞರಾಗಿದ್ದರು. ದೇಶದ ಆರ್ಥಿಕ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್ ಹೇಳಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಕೃಷ್ಣಾನಗರದಲ್ಲಿನ ಶಾಸಕರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗುರುವಾರ ನಿಧನರಾದ ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಪ್ರಚಾರ ಬಯಸದೇ ತಮ್ಮ ಕೆಲಸದ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಡಾ. ಮನಮೋಹನ್‌ ಸಿಂಗ್ ಶ್ರಮಿಸಿದರು. ಅವರ ಚಿಂತನೆಗಳು ಹಾಗೂ ಕಾರ್ಯಗಳು ನಮಗೆಲ್ಲ ಆದರ್ಶವಾಗಿವೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಅವರು ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಗಳ ಕುರಿತು ಮಾತನಾಡಿ, ತಮ್ಮ ನುಡಿನಮನವನ್ನು ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಪುರಸಭೆ ಸದಸ್ಯರಾದ ಎಲ್.ಹೆಚ್. ಶಿವಕುಮಾರ್, ಕೆ.ವಿ. ಸುರೇಶ್, ಈರೇಶ್ ಶಿಂಧೆ, ಮುಖಂಡರಾದ ಪಿ. ಜಯರಾಂ, ಮರಿಸ್ವಾಮಿ, ಟಿ.ಜಿ. ಸುರೇಶ್‌ಗೌಡ, ಮೂಲಿಮನೆ ತಿಪ್ಪೇಸ್ವಾಮಿ, ಎಸ್.ವಿ. ಹಿರೇಮಠ, ಜಿ.ಎಸ್. ಸೋಮಪ್ಪ, ಆದಿನಾರಾಯಣ, ವೆಂಕಟೇಶ್, ಗಂಟಿ ಕುಮಾರಸ್ವಾಮಿ, ರಾಘವೇಂದ್ರ, ಜೆಬಿಟಿ ಬಸವರಾಜ, ತುಮಟಿ ಅಂಜಿನಪ್ಪ, ಎರಿಸ್ವಾಮಿ, ಐಕಲ್ ಆದರ್ಶ, ಶೈಲಜಾ ನಿಕ್ಕಂ, ಲಕ್ಷ್ಮೀ, ಕೊಂಡಾಪುರ ಕುಮಾರಸ್ವಾಮಿ, ಆದಿನಾರಾಯಣ ಮುಂತಾದರು ಉಪಸ್ಥಿತರಿದ್ದರು.

ಸಂಡೂರು ಬಳಿಯ ಕೃಷ್ಣಾನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗುರುವಾರ ನಿಧನರಾದ ದೇಶದ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.